Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಬಸವರಾಜ ಹೊರಟ್ಟಿ ಶಿಕ್ಷಕರ ಸಮಸ್ಯೆಗೆ ಸ್ವಂದಿಸುವ ಕಾರ್ಯ ಮಾಡಿಲ್ಲ: ಆರ್.ಎಚ್.ನಾಯ್ಕ

ಕುಮಟಾ: ಪಶ್ವಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್  ಪಕ್ಷದ ಅಭ್ಯರ್ಥಿಗಳಾದ ಬಸವರಾಜ್ ಗುರಿಕಾರ ಅವರ ಪರವಾಗಿ ಕಾಂಗ್ರೆಸ್ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಆರ್.ಎಚ್.ನಾಯ್ಕ ಹಾಗೂ ಮಾಜಿ. ಜಿ.ಪಂ  ಸದಸ್ಯರಾದ ಹೊನ್ನಪ್ಪ ನಾಯಕ ಬಿರುಸಿನ ಪ್ರಚಾರ ನಡೆಸಿದರು.ಹಿರೇಗುತ್ತಿಯ ಪದವಿ ಪೂರ್ವ ಕಾಲೇಜು, ಜನತಾ ವಿದ್ಯಾಲಯ ಮಿರ್ಜಾನ,ದಿವಗಿ ಪ್ರಾಥಮಿಕ ಶಾಲೆಯಲ್ಲಿ ಮತಯಾಚನೆ ಮಾಡಿದರು.

ಈ ವೇಳೆ ಕಾಂಗ್ರೆಸ್ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಆರ್.ಎಚ್.ನಾಯ್ಕ  ಮಾತನಾಡಿ  ಬಸವರಾಜ ಗುರಿಕಾರ ಅವರು ಶಿಕ್ಷಣ ಕ್ಷೇತ್ರದಲ್ಲಿ 30ಕ್ಕೂ ಹೆಚ್ಚು ವರ್ಷಗಳ ಕಾಲ ಅನುಭವ ಹೊಂದಿದವರಾಗಿದ್ದಾರೆ. ಅಲ್ಲದೇ ಶಿಕ್ಷಕರ ಸಂಘದ ರಾಜ್ಯ, ರಾಷ್ಟ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಶಿಕ್ಷಕರ ಸಮಸ್ಯೆಗೆ ಸ್ವಂದಿಸುವ ಕೆಲಸ ಮಾಡಿದ್ದಾರೆ.

 ಈ ಭಾರಿ ಕಾಂಗ್ರೆಸ್ ಪಕ್ಷ ಗುರುತಿಸಿ ಶಿಕ್ಷಕರ ಕ್ಷೇತ್ರದಲ್ಲಿ ಅವಕಾಶ ನೀಡಿದೆ. ನಮ್ಮ ಅಭ್ಯರ್ಥಿಗಳಿಗೆ ಮತವನ್ನು ನೀಡಿ ಬದಲಾವಣೆ ತರಬೇಕಾಗಿದೆ, ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸದಸ್ಯರಾಗಿ ನಿಜವಾಗಿಯೂ ಶಿಕ್ಷಕರ ಸಮಸ್ಯೆಗಳಿಗೆ ಹಾಗೂ ಅಭಿವೃದ್ದಿಗೆ ಶ್ರಮಿಸಿದ್ದರೆ, ಈ ಚುನಾವಣೆಯಲ್ಲಿ ಮನೆಯಲ್ಲಿಯೇ ಕುಳಿತು ಪ್ರಚಾರ ಮಾಡುವ ಮೂಲಕ ಮತವನ್ನುಯಾಚಿಸಬಹುದಿತ್ತು.  ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ, ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಗುರಿಕಾರ ಗೆಲ್ಲಿಸುವಂತೆ ಕರೆನೀಡಿದರು.

ಈ ವೇಳೆ ಮಾಜಿ ಜಿ.ಪಂ ಸದಸ್ಯರಾದ ಹೊನ್ನಪ್ಪ ನಾಯ್ಕ, ಶಿಕ್ಷಕರಾದ ರಾಮು ನಾಯಕ, ಇಂದಿರಾ ನಾಯಕ, ಇದ್ದರು