Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಸರಸ್ವತಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಅತ್ಯಅಮೋಘ ಸಾಧನೆ : ರಾಜ್ಯ ಮಟ್ಟದ ರ‍್ಯಾಂಕ್ ನೊಂದಿಗೆ ಶೇಕಡಾ 100ರ ದಾಖಲೆ

ಕುಮಟಾ : ಕೊಂಕಣ ಎಜ್ಯುಕೇಶ್ಯನ್ ಟ್ರಸ್ಟನ ಬಿ.ಕೆ. ಬಂಡಾರಕ್ಕರ್  ಸರಸ್ವತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಶಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಪ್ರತಿ ಬಾರಿಯಂತೆ ಈ ಬಾರಿಯು ರಾಜ್ಯ ಮಟ್ಟದ ರ‍್ಯಾಂಕ್ ನೊಂದಿಗೆ ಶೇಕಡಾ 100ರ ಫಲಿತಾಂಶ ದಾಖಲೆಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳಾದ ಪ್ರಜ್ಞಾ ಪ್ರಕಾಶ ಶ್ಯಾನಭಾಗ 97.83% (ಲೆಕ್ಕಶಾಸ್ತ್ರ 100, ಸಂಖ್ಯಾಶಾಸ್ತ್ರ ದಲ್ಲಿ 100), 600ಕ್ಕೆ 587 ಅಂಕ ಗಳಿಸಿ ಪ್ರಥಮ ಸ್ಥಾನವನ್ನು, ಶರದ್ ಕಿರಣ ನಾಯಕ ೯೬.೮೩% (ಲೆಕ್ಕಶಾಸ್ತ್ರ 100) 600ಕ್ಕೆ 581 ಅಂಕ ಗಳಿಸಿ ದ್ವಿತೀಯ ಸ್ಥಾನವನ್ನು, ರಕ್ಷಾ ಸುಭ್ರಾಯ ಭಟ್ಟ್ 96.66% (ಸಂಖ್ಯಾಶಾಸ್ತ್ರ ದಲ್ಲಿ 100) 600ಕ್ಕೆ 580 ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 6 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಅಂಕಗಳಿಸಿದರೆ, 12 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಅಂಕಗಳಿಸಿದರೆ, 15 ವಿದ್ಯಾರ್ಥಿಗಳು ೮೫ಕ್ಕಿಂತ ಅಧಿಕ ಅಂಕಗಳಿಸಿದರೆ, 17 ವಿದ್ಯಾರ್ಥಿಗಳು 80ಕ್ಕಿಂತ ಅಧಿಕ ಅಂಕಗಳಿಸಿದರೆ, ಉಳಿದೆಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಅಲ್ಲದೇ 6 ವಿದ್ಯಾರ್ಥಿಗಳು ಸಂಖ್ಯಾಶಾಸ್ತ್ರ ದಲ್ಲಿ ಹಾಗೂ 3 ವಿದ್ಯಾರ್ಥಿಗಳು ಲೆಕ್ಕಶಾಸ್ತ್ರದಲ್ಲಿ, 1 ವಿದ್ಯಾರ್ಥಿ ಅರ್ಥಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿ ಸಂಸ್ಥೆಗ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಆಡಳಿತ ಮಂಡಳಿಯವರು, ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.