ಕುಮಟಾ: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ಬ್ಯಾಗ್ ತೆರೆದು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ನಗದು ಕಳ್ಳತನ ನಡಸಿದ ಮೂವರನ್ನು ಕುಮಟಾ ಪೋಲಿಸರು ಬಂಧಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಅತ್ತಿಬೆಲೆ ಆನೆಕಲ್ ರೋಡ್‌ನ ಮಾರಿಯಮ್ಮ ದೇವಸ್ಥಾನದ ಸಮೀಪದ ನಿವಾಸಿಗಳಾದ ಆದಿಯಮ್ಮ ತಿರುಪತಿ (೪೨) ವೆಂಕ್ಟಮ್ಮ ತಿರುಪತಿ, ಲಲಿತಾ ನಾಗರಾಜ (೩೨) ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರು ಸೇರಿ ಕುಮಟಾ ಪಟ್ಟಣದಲ್ಲಿ ಮಹಿಳೆಯೋರ್ವಳು ಬಸ್ ಹತ್ತುವಾಗ ಬ್ಯಾಗ ಜೀಪ್ ತೆಗೆದು ಅದರಲ್ಲಿದ್ದ ಸುಮಾರು ೧೨೪ ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಮತ್ತು ೫೦ ಸಾವಿರ ನಗದು ಕಳ್ಳತನ ನಡೆಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕುಮಟಾ ಪೋಲಿಸರು ಮೂವರು ಮಹಿಳೆಯರನ್ನು ಬಂಧಿಸಿ ಎಲ್ಲಾ ಆಭರಣಗಳನ್ನು ಮತ್ತು ೬೦೩೦ ರೂ ನಗದು ವಶಪಡಿಸಿಕೊಂಡಿದ್ದಾರೆ.
ಸಿ.ಪಿ.ಐ ತಿಮ್ಮಪ್ಪ ನಾಯ್ಕ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ನವೀನ ನಾಯ್ಕ ಪದ್ಮಾ ದೇವಳಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ದಯಾನಂದ ನಾಯ್ಕ , ಸಂತೋಷ ಬಾಳೇರ,ಬಸವರಾಜ್ ಜಾಡರ್, ಕೃಷ್ಣ, ಎನ್.ಜಿ, ದುರ್ಗಪ್ಪ ಕಲ್ಲಘಟಗಿ, ಗುರು ನಾಯಕ, ಶಿವಾನಂದ ಜಾಡರ, ಅಶ್ವಿನಿ ಹರಿಕಂತ್ರ, ಅರ್ಚನಾ ಪಟಗಾರ,ಮಾದೇವಿ ಗೌಡ, ಸಾಧನಾ ನಾಯಕ ರಾಧಾ ಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.