ಬಾಲಚಂದ್ರ ಪಾಂಡುರoಗ ಶಾನಭಾಗ್ ಅವರು ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶಿರಸಿಯ ಹುಲೇಕಲ್ ನಿವಾಸಿ ಕಾಮಾಕ್ಷಿ ಪೈ (೨೭) ಅಪಹರಣಕ್ಕೊಳಗಾದ ಯುವತಿ ಈಕೆಯು ಶಿರಸಿಯ ಹುಲೇಕಲ್ ನಿವಾಸಿ ಎಲ್.ಐ.ಸಿ ಎಜೆಂಟ್ ಸುಬ್ರಹ್ಮಣ್ಯ ಭಂಡಾರಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಈ ವಿಷಯ ಮನೆಗೆ ತಿಳಿದಿದ್ದರಿಂದ ಆತಂಕಗೊಂಡ ಯುವತಿಯ ಕುಟುಂಬಸ್ಥರು, ಆಕೆಗೆ ಬುದ್ದಿಮಾತು ಹೇಳಿ, ತಮ್ಮ ಸಂಭಂದಿ ಮನೆಯಾದ ಕುಮಟಾದ ಕೊಡ್ಕಣಿಗೆ ತೆರಳಿ, ಯುವತಿಯಿದ್ದ ಮನೆಗೆ ಹೋಗಿದ್ದಾರೆ. ಅಲ್ಲದೇ ಮನೆಗೆ ನುಗ್ಗಿ, ಯುವತಿಯ ಸಂಭಂದಿಯಾದ ವೃದ್ದನ ಮೇಲೆ ಹಲ್ಲೆ ಮಾಡಿ, ಇತರಿಗೆ ಧಮಕಿ ಹಾಕಿ, ಯುವತಿಯನ್ನು ಅಲ್ಲಿಂದ ಅಪಹರಿಸಿದ್ದಾರೆಂದು ಯುವತಿಯ ಕುಟುಂಬಸ್ಥರು ಪೋಲಿಸ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ರವಿ ಗುಡ್ಡಿ ಅವರ ತಂಡ ತನಿಖೆ ಕೈಗೊಂಡಿದ್ದಾರೆ.