ಕುಮಟಾ: ತಾಲೂಕಿನ ದೀವಗಿಯ ನವಗ್ರಾಮದ ನಿವಾಸಿ ಗೌರಿ ಗಜಾನನ ಅಂಬಿಗ ಎಂಬುವವರ ಮನೆಯು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೋಗಿದ್ದು, ಲಕ್ಷಾಂತರ ರೂ ಮೌಲ್ಯದ ಗೃಹ ಬಳಕೆ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗಿತು.
ಹಾನಿಯಾದ ಸ್ಥಳಕ್ಕೆ , ಕೆ.ಡಿ.ಸಿ.ಸಿ ಬ್ಯಾಂಕ ನಿರ್ದೇಶಕರು & ಜಿ.ಪಂ ನಿಕಟಪೂರ್ವ ಸದಸ್ಯರಾದ ಗಜಾನನ ಪೈ ಅವರು ಭೇಟಿ ನೀಡಿ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಂಭಂಧಪಟ್ಟ ಪರಿಹಾರೊಪಾಯದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಂತರ ಕೆ.ಡಿ.ಸಿ.ಸಿ ಬ್ಯಾಂಕ್‌ನಿಂದ 15000 ಮತ್ತು ವಯಕ್ತಿಕವಾಗಿ 5000 ಆರ್ಥಿಕ ನೆರವು ನೀಡಿದರು. ಈ ಬಗ್ಗೆ ಶಾಸಕರಲ್ಲಿ ಚರ್ಚಿಸಿ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ದಿವಗಿ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು ಊರಿನ ನಾಗರಿಕರಿದ್ದರು.
ಈ ವೇಳೆ ದಿವಗಿ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು ಊರಿನ ನಾಗರಿಕರಿದ್ದರು.