ಕುಮಟಾ : ಸರ್ಕಾರದಿಂದ ಬಂದ ಅನುದಾನವನ್ನು ಸಮರ್ಪಕವಾಗಿ ಸರಿಯಾದ ಸಮಯದಲ್ಲಿ ಕಾರ್ಯನಿರ್ವಹಿಸುವಲ್ಲಿ ಕುಮಟಾ ತಾಲೂಕ ಪಂಚಾಯತ್ ಅಧಿಕಾರಿಗಳು ವೈಫಲ್ಯವಾಗಿದೆ.
ಕುಮಟಾ ತಾಲೂಕ ಪಂಚಾಯತಕ್ಕೆ ಸರ್ಕಾರದಿಂದ ಸುಮಾರು ಎರಡು ಕೋಟಿ ಅಷ್ಟು ಅನುದಾನ ಬಂದಿದ್ದು ಇನ್ನೂ ಕೂಡ ಅನುದಾನವನ್ನು ಸರಿಯಾಗಿ ಹಂಚಿಕೆ ಮಾಡದೆ, ಕ್ರೀಯಾ ಯೋಜನೆಯನ್ನು ಸಹ ಸರಿಯಾಗಿ ಸಿದ್ದಪಡಿಸದೆ, ಅಂದಾಜು ಪಟ್ಟಿಯನ್ನು ಕೂಡ ಸಿದ್ಧಪಡಿಸದೆ, ಟೆಂಡರ್ ಪ್ರಕ್ರಿಯೆ ಸಿದ್ಧತೆ ಇನ್ನು ಆರಂಭಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಅಂಬೇಡ್ಕರ್ ಸೇನೆಯ ತಾಲೂಕಧ್ಯಕ್ಷ ಗಜಾನನ ಹಳ್ಳೆರ ಅವರು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಅನುದಾನವನ್ನು ನೀಡಿ ಸರಿಸುಮಾರು ಮೂರು ತಿಂಗಳುಗಳೆ ಕಳೆದಿದ್ದರೂ ಕೂಡ ಯಾವುದೇ ರೀತಿಯ ಅಂದಾಜು ಪಟ್ಟಿಯನ್ನು ಸಿದ್ಧಪಡಿಸದೆ, ಟೆಂಡರ್ ಪ್ರಕ್ರಿಯೆ ಕೂಡ ಪ್ರಾರಂಭಗೊಂಡಿಲ್ಲ, ಟೆಂಡರ್ ಪ್ರಕ್ರಿಯೆ ಆರಂಭಗೊಂಡು ಮತ್ತೆ ಕಾಮಗಾರಿ ಆದೇಶ ನೀಡಲು ಸರಿಸುಮಾರು ಎರಡು ತಿಂಗಳ ಸಮಯಾವಕಾಶ ಬೇಕಾಗುತ್ತದೆ, ಈ ಬಗ್ಗೆ ಕಚೇರಿಗೆ ಹೋಗಿ ವಿಚಾರಿಸಿದರೆ ಸಮರ್ಪಕವಾಗಿ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ, ಫೋನ್ ಮೂಲಕ ಸಂಪರ್ಕಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಸ್ವಿಚ್ ಆಫ್ ಮಾಡುವುದು, ಆಮೇಲೆ ಮಾತನಾಡುತ್ತೇನೆಂದು ಫೋನ್ ಕಟ್ ಮಾಡುವುದು ಮಾಡುತ್ತಿದ್ದಾರೆ. ಯಾವುದೇ ಪಾರದರ್ಶಕತೆ ಅನುಸರಿಸುತ್ತಿಲ್ಲ. ಈ ಬಗ್ಗೆ ನಾವು ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ನಾಯ್ಕ ಮತ್ತು ಯುವ ಮುಖಂಡರಾದ ವಿನಾಯಕ ಶೆಟ್ಟಿ ಅವರಕ್ಕೆ ಗಮನಕ್ಕೆ ತಂದಿದ್ದು, ಅವರ ನೇತೃತ್ವದಲ್ಲಿ, ಧರಣಿ ಸತ್ಯಾಗ್ರಹವನ್ನು ಮಾಡಲಿದ್ದೇವೆ,
ಅಲ್ಲದೆ ಮಾನ್ಯ ಲೋಕಾಯುಕ್ತರಲ್ಲೂ ದೂರು ದಾಖಲಿಸಲಿದ್ದೇವೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
