Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಬಿಜೆಪಿ,ಜೆಡಿಎಸ್ ಗೆ ಗುಡ್ ಬೈ ಹೇಳಿದ ಪ್ರದೀಪ ನಾಯಕ,ಯಶೋಧರ ನಾಯ್ಕ,‌ಗಾಯತ್ರಿ ಗೌಡ: ____ಅಧಿಕೃತವಾಗಿ ಕೈ ಹಿಡಿದಿರುವ ನಾಯಕರು

ಬೆಂಗಳೂರು:- ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ದಿಸಿದ್ದ ಪ್ರದೀಪ್ ನಾಯಕ ಹಾಗೂ ಬಿಜೆಪಿಯ,  ಗೋಕರ್ಣ ಜಿ.ಪಂ ಮಾಜಿ ಸದಸ್ಯೆ ಗಾಯತ್ರಿ ಗೌಡ, ಬಿಜೆಪಿ ಮುಖಂಡ ಯಶೋಧರ ನಾಯ್ಕ,   ಜಿಲ್ಲೆಯ  ಜೆಡಿಎಸ್ & ಬಿಜೆಪಿಯ  ಮುಖಂಡರು ಹಾಗೂ  ಕಾರ್ಯಕರ್ತರು ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ 

ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ ,ಮಾಜಿ ಶಾಸಕಿ ಶಾರದಾ ಶೆಟ್ಟಿ, ಅವರ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ್, ಪ್ರಶಾಂತ್ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.


ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮಿರ್ಜಾನ,ಗೋಕರ್ಣ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಗೆ ಭಾರೀ ಹಿನ್ನಡೆ ಉಂಟಾಗಿತ್ತು. ಆದ್ರೆ ಇದೀಗ ಈ ಭಾಗದಿಂದ ಬೇರೆ ಬೇರೆ ಪಕ್ಷದ ಇಬ್ಬರೂ ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ಉದ್ಯಮಿ ಯಶೋಧರ ನಾಯ್ಕ ಕಾಂಗ್ರೆಸ್ ಸೇರ್ಪಡೆ ಕಾಂಗ್ರೆಸ್‌ ಗೆ ಇನ್ನಷ್ಟು ಬಲ ಬರಲಿದೆ.


ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸವಾಲು!


ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿಯವರು ಮೊದಲಿನಿಂದಲೂ ವಿಧಾನಸಭೆ ಟಿಕೆಟ್ ಅನ್ನು ಪಡೆಯುತಿದ್ದರು .ಆದರೇ ಮುಂಬರುವ ಚುನಾವಣೆಯಲ್ಲಿ ಬಹುತೇಕ ಶಾರದಾ ಶೆಟ್ಟಿಯವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳುತ್ತವೆ.

ಜೆಡಿಎಸ್ ನಲ್ಲಿ ಇದ್ದ ಪ್ರದೀಪ್ ನಾಯಕ ಇದೀಗ ಕಾಂಗ್ರೆಸ್ ಗೆ ಬಂದಿದ್ದು ಸ್ಪರ್ದಾಕಾಂಶಿ ಕೂಡ .ಕಾಂಗ್ರೇಸ್ ಸೇವಾದಳದ ಜಿಲ್ಲಾಧ್ಯಕ್ಷರಾದ ಆರ್.ಎಚ್. ನಾಯ್ಕ ಕೂಡಾ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ.ಇನ್ನು ಸ್ಥಳೀಯವಾಗಿ ಜಿ.ಪಂ ನಿಕಟಪೂರ್ವ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕ ಅವರು ಕೂಡಾ ಟಿಕೇಟ್ ಪ್ರಬಲ ಆಕಾಂಕ್ಷಿ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ . ಇನ್ನು ಇವರಿಗೆ ಮೂಲ ಬಿಜೆಪಿಗರು ಹಾಗೂ ಪ್ರಭಲ ಜನಾಂಗಗಳ ಬೆಂಬಲ ಸಹ ಇದೆ. ಹೀಗಿರುವಾಗ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಟಿಕೆಟ್ ನೀಡುವುದೇ ದೊಡ್ಡ ಸಮಸ್ಯೆಯಾಗುವ ಸಾಧ್ಯತೆಗಳಿವೆ.