ಕುಮಟಾ: ಬಿಜೆಪಿಯ ಬೆಂಗಳೂರು ಕಚೇರಿಯಲ್ಲಿ ಪಕ್ಷದ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿಯ ಸದಸ್ಯರಿಗೆ ನೇಮಕಾತಿ ಪತ್ರವನ್ನು ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿಯವರು ವಿತರಣೆ ಮಾಡಿದರು.ನಂತರ ಮಾತನಾಡಿದ ಅವರು ಸಂಘಟನೆಯ ಬಲವರ್ಧನೆಗೆ ಶ್ರಮಿಸುವಂತೆ ಕರೆ ನೀಡಿದರು.
ಪ್ರಕೋಷ್ಠ ಗಳ ರಾಜ್ಯ ಸಂಯೋಜಕರಾದ ದತ್ತಾತ್ರಿಯವರು ಸಮಿತಿಯ ಕಾರ್ಯ ವ್ಯಾಪ್ತಿ ಹಾಗೂ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು.ರಾಜ್ಯ ಸಂಚಾಲಕ ಶಶಿಧರ ರವರು ಪ್ರಾಸ್ತಾವಿಕ ಮಾತನಾಡಿದರು.ಈ ಸಭೆಯಲ್ಲಿ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಹಸಂಚಾಲಕರಾದ ಎಂ ಜಿ ಭಟ್ ಅವರು ವೇದಿಕೆ ಹಂಚಿಕೊಂಡಿರುವುದು ವಿಶೇಷವಾಗಿತ್ತು. ಪಕ್ಷದ ಸಂಘಟನೆ ಒತ್ತು ನೀಡುವ ಹಾಗೂ ಕಾರ್ಯಕರ್ತರಿಗೆ ಸಂಘಟನೆ ಬಲಗೊಳ್ಳಲು ಪ್ರೇರಣೆ ನೀಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ರವಿಕುಮಾರ್ ಶ್ರೀ ಕೆ ಎಸ್ ನವೀನ್ ಹಾಗೂ ಪ್ರಕೋಷ್ಠ ಗಳ ರಾಜ್ಯ ಸಹ ಸಂಯೋಜಕರಾದ ಶ್ರೀ ಫಣಿಶ ಇದ್ದರು.