ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿಯಯಾದ ಗಂಗೂಬಾಯಿ ಮಾನಕರ್ ವರ್ಷ ಕಳೆಯುವುದರೊಳಗೆ ಜಿಲ್ಲೆಯಿಂದ ವರ್ಗಾವಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಲಕ್ಷ್ಮಿ ಪ್ರೀಯಾ ರನ್ನು ವರ್ಗಾಯಿಸಲಾಗಿದೆ. ಮೈಸೂರಿನ ಅಬ್ದುಲ್ ನಜೀರ್ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಝ್ ಸಂಸ್ಥೆಯ ನಿರ್ದೇಶಕಿಯಾಗಿದ್ದ ಲಕ್ಷ್ಮಿ ಪ್ರೀಯಾ ಇದೀಗ ಉತ್ತರ ಕನ್ನಡ ಜಿಲ್ಲೆಧಿಕಾರಿಯಾಗಿ ವರ್ಗವಾಗಿದ್ದು, ಇದರೊಂದಿಗೆ ಜಿಲ್ಲೆಗೆ ಮೂರನೇ ಮಹಿಳಾ ಜಿಲ್ಲಾಧಿಕಾರಿ ಆಗಮಿಸಿದಂತಾಗಿದೆ. ನೂತನ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರೀಯಾ ಕೆ. ಅವರು ಆದೇಶ ಮಾಡಿದ ಕೆಲ ಗಂಟೆಗಳಲ್ಲಿ ಜಿಲ್ಲೆಗೆ ಆಗಮಿಸಿ ಕಚೇರಿಯಲ್ಲಿ ತಮ್ಮ ಅಧಿಕಾರ ಸ್ವೀಕರಿಸಿದ್ದಾರೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ಮೊದಲ ಕಡತಕ್ಕೆ ಸಹಿ ಮಾಡಿದರು. ನೂತನ ಜಿಲ್ಲಾಧಿಕಾರಿಗಳನ್ನು ಅಧೀನ ಅಧಿಕಾರಿಗ ಹಾಗೂ ಸಿಬ್ಬಂದಿಗಳು ಆತ್ಮೀಯವಾಗಿ ಬರಮಾಡಿಕೊಂಡರು.ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಲಕ್ಷ್ಮಿ ಪ್ರೀಯಾ ಕೆ. ೫೯ ನೇ ಜಿಲ್ಲಾಧಿಕಾರಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿದ್ದ ಎನ್.ವಿಷ್ಣುವರ್ಧನರನ್ನು ಕಳೆದ ಮೂರು ದಿನದ ಹಿಂದಷ್ಟೇ ಜಿಲ್ಲೆಯಿಂದ ವರ್ಗ ಮಾಡಲಾಗಿತ್ತು. ಎನ್.ವಿಷ್ಣುವರ್ಧನಗೆ ಮೈಸೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರನ್ನು ವರ್ಗಾಯಿಸಲಾಗಿತ್ತು. ಆದರೆ ಇದೀಗ ವರ್ಗವಾಗಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ಗೆ ರಾಜ್ಯಪತ್ರ ಇಲಾಖೆಗೆ ವರ್ಗ ಮಾಡಲಾಗಿದೆ.