ಕುಮಟಾ : ಇಂದಿನ ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನ ಅಗತ್ಯ.ಮುಸುಗುಪ್ಪೆಯ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಕಂಪ್ಯೂಟರ್ ಒಂದು ಅಗತ್ಯ ಇದೆ ಎಂದು ಬಿಜೆಪಿ ರಾಜ್ಯಶಿಕ್ಷಣ ಪ್ರಕೋಷ್ಟದ ಸಹ ಸಂಚಾಲಕ ಎಂ ಜಿ ಭಟ್ ರವರು ಅಭಿಪ್ರಾಯಪಟ್ಟರು. ಅವರು ಮುಸಗುಪ್ಪೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ದಿವಂಗತ ಎಂ ವಿ ಭಟ್ ಕೂಜಳ್ಳಿ ಇವರ ಸ್ಮರಣಾರ್ಥ ಅವರ ಪತ್ನಿ ಪಾರ್ವತಿ ಭಟ್ ಅವರು ಕಂಪ್ಯೂಟರ್ ಒಂದನ್ನು ದೇಣಿಗೆಯಾಗಿ ನೀಡಿದ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಧವರು ಎಂ ಜಿ ಭಟ್ ರವರಲ್ಲಿ ವಿನಂತಿಸಿಕೊಂಡಾಗ ಅವರು ಪಾರ್ವತಿ ಭಟ್ ಅವರನ್ನು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಿದರು.
ಪಾರ್ವತಿ ಭಟ್ಟರು ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾರ್ವತಿ ಭಟ್ಟರು, ಮಕ್ಕಳಿಗೆ ಚೆನ್ನಾಗಿ ಓದಿ ದೇಶದ ಉತ್ತಮ ಪ್ರಜೆಗಳಾಗಿ ಇಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯಾದ್ಯಾಪಕಿ ಸುಮಂಗಲ ಹೆಗಡೆ ಸ್ವಾಗತಿಸಿದರು ಸಿಆರ್‌ಪಿ ಲಿಂಗಪ್ಪ ಪಟಗಾರ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಗೌಡ ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷ ಜಟ್ಟು ಗೌಡ , ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಈಶ್ವರ್ ಗೌಡ ದೇವು ಗೌಡ ಮಾರುತಿ ಗೌಡ ಸತ್ಯನಾರಾಯಣ ಗೌಡ ರವಿ ಗೌಡ ವಿನಾಯಕ್ ಗೌಡ ಹಾಗೂ ಇತರರು ಇದ್ದರು ಶಿಕ್ಷಕ ಎಮ್ ಡಿ ಭಂಡಾರಿ ವಂದಿಸಿದರು. ಅಂಗನವಾಡಿ ಶಿಕ್ಷಕಿ ವಿಮಲಾ ನಾಯಕ್ ನಿರೂಪಿಸಿದರು.