ಕಾರವಾರ: ಕುಮಟಾ- ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೋಳಿಸಬೇಕಾಗಿರುವುದರಿಂದ ನಾಲ್ಕು ತಿಂಗಳು ಕಾಲ ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಕಳೆದ ೪ ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಕಾಮಗಾರಿಯನ್ನು ಕೈಗೊಂಡಿದ್ದು, ಕೆಲವು ಕಡೆಯಲ್ಲಿ ಚಿಕ್ಕ ಸೇತುವೆ, ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾರಣ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಬೇಕಾಗಿರುವ ಕಾರಣ ೧೫ ಅಕ್ಟೋಬರ್ ೨೦೨೪ ರಿಂದ ೨೫ ಪೇಬ್ರುವರಿ ೨೦೨೫ ತನಕ ಒಟ್ಟು ನಾಲ್ಕು ತಿಂಗಳುಗಳ ಕಾಲ ರಸ್ತೆಯ ಸಂಚಾರವನ್ನು ಬಂದ್ ಮಾಡಲು ಜಿಲ್ಲಾಡಳಿತ ಪೂರ್ವ ಸಿದ್ದತೆಯನ್ನು ನಡೆಸಿದೆ. ಸಂಪೂರ್ಣವಾಗಿ ಹೆದ್ದಾರಿಯನ್ನು ಬಂದ್ ಮಾಡಿ ಸೇತುವೆ ಹಾಗೂ ಹೆದ್ದಾರಿ ಕಾಮಗಾರಿಯನ್ನ ಕೈಗೊಳ್ಳಾಗುವುದು. ಈ ಸಮಯದಲ್ಲಿ ಬದಲಿ ಸಂಚಾರ ವ್ಯವಸ್ಥೆ ಕಲ್ಪಿಸುವ ಬಗ್ಗೆ ಆದೇಶ ಹೊರಡಿಸಲಾಗಿದೆ.
ಬದಲಿ ಸಂಚಾರ ವ್ಯವಸ್ಥೆ:
ಕುಮಟಾ ಶಿರಸಿ ಮೂಲಕ ಸಿದ್ದಾಪುರ ಎಸ್.ಹೆಚ-೬೯ ಮಾರ್ಗವಾಗಿ ಲಘು ವಾಹನಗಳ ಸಂಚಾರ, ಅಂಕೋಲಾ- ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ-೬೩ ಮತ್ತುಎಸ್.ಎಚ್-೯೩ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚಾರಕ್ಕೆ ಅವಕಾಶ.
ಮಂಗಳೂರು-ಹೊನ್ನಾವರ-ಶಿರಸಿ ಮೂಲಕ ಸಿದ್ದಾಪುರ ಮಾವಿನಗುಂಡಿ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದಾಗಿದೆ. ಕುಮಟಾ-ಕಾರವಾರ ಶಿರಸಿ ಮೂಲಕ ಯಾಣ ಮಾರ್ಗವಾಗಿ ಲಘುವಾಹನಗಳ ಸಂಚಾರಕ್ಕೆ ಅವಕಾಶ ಇರಲಿದೆ.