Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯಲ್ಲಿ ಸೋಲಾರ ಬೀದಿ ದೀಪ ವಿತರಣೆಯ ಉದ್ಘಾಟನಾ ಕಾರ್ಯಕ್ರಮ


ಕುಮಟಾ: ಸಮೀಪದ  ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆಯಲ್ಲಿ    ಸೋಲಾರ ಬೀದಿ ದೀಪ  ವಿತರಣೆಯ ಉದ್ಘಾಟನಾ ಕಾರ್ಯಕ್ರಮ ಗುರುಪ್ರಸಾದ ಎಜ್ಯುಕೇಶನ್ ಸೊಸೈಟಿ (ರಿ.) ಹಾಗೂ ಗುರುಪ್ರಸಾದ ಪ್ರೌಢಶಾಲೆ, ಮಲ್ಲಾಪುರ ತಾ|| ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ನೇರವೇರಿತು.


ಇಂಡೋಕೋ ರೆಮೇಡಿಸ್ ಲಿಮಿಟೆಡ್ ಇವರ ಸುಮತಿ ಸಂಗೋಪನಾ ವಿಭಾಗದ ಪ್ರಾಯೋಜಕತ್ವದಲ್ಲಿ ಸಿ.ಎಸ್.ಆರ್. ಫಂಡ್‍ನ್ನು ಭಾರತೀ ವಿಕಾಸ ಟ್ರಸ್ಟ್ ಮಣಿಪಾಲ ಎನ್.ಜಿ.ಓ. ಇದರ ಸಹಯೋಗದಲ್ಲಿ ಸೆಲ್ಕೋ ಸೋಲಾರ್ ಲೈಟ್ (ಪ್ರೈ.) ಲಿಮಿಟೆಡ್, ಕುಮಟಾ ಇವರು ಮಲ್ಲಾಪುರ ಗ್ರಾಮದ ಬೀದಿಗಳಲ್ಲಿ, ಸ್ಮಶಾನದ ಸಮೀಪ ಹಾಗೂ ಗುರುಪ್ರಸಾದ ಪ್ರೌಢಶಾಲೆ, ಮಲ್ಲಾಪುರದ ಆಟದ ಮೈದಾನದಲ್ಲಿ ಹೀಗೆ ಸುಮಾರು 16 ಸೋಲಾರ್ ಬೀದಿ ದೀಪಗಳನ್ನು ಅಳವಡಿಸುವುದರ ಮೂಲಕ ಮಲ್ಲಾಪುರ ಗ್ರಾಮವನ್ನು ರಾತ್ರಿ ಸಮಯದಲ್ಲಿ ಸೋಲಾರ್ ದೀಪದಿಂದ ಬೆಳಗುವಂತೆ ಮಾಡಿರುತ್ತಾರೆ. ಇದು ಇಲ್ಲಿ ಕಲಿಯುವ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೂ, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ, ಊರನಾಗರಿಕರಿಗೂ ತುಂಬಾ ಉಪಯುಕ್ತವಾಗಿದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಹರ್ಷ ವ್ಯಕ್ತಪಡಿಸಿದರು.


ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಅರುಣ ಎಸ್. ಉಭಯಕರ, ಉದ್ಘಾಟಕರಾಗಿ ಸಮೀರ್ ಡೈನಿ, ಮುಖ್ಯ ಅತಿಥಿಗಳಾಗಿ ಡಾ|| ದೀಪಕ ನಾಯ್ಕ,  ಜಯಶ್ರೀ ಕಾಮತ್, ಶ್ರೀ ಜಗದೀಶ ಪೈ,  ಅರವಿಂದ ಪ್ರಭು,  ಬಸವರಾಜ ಕೋಲ್‍ಕರ್,  ಗುರುಪ್ರಕಾಶ ಶೆಟ್ಟಿ,  ಛಾಯಾ ಉಭಯಕರ,  ರಾಜು ನಾಯ್ಕ ಇವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶೈಕ್ಷಣ ಕ ಸಲಹೆಗಾರರು ಶ್ರೀ ಎಂ. ಟಿ. ಗೌಡ ಇವರು ಹಾಗೂ ಇಂಡಿಕೋ ರೆಮಿಡಿಸ್ ಲಿಮಿಟೆಡ್‍ನ ಉದ್ಯೋಗಿಗಳು , ಸೆಲ್ಕೋ ಸೋಲಾರ ಕುಮಟಾದ ಪರಿವಾರದವರು ಭಾರತೀಯ ವಿಕಾಸ ಟ್ರಸ್ಟ್‍ನ ಸಹದ್ಯೋಗಿಗಳು, ಗುರುಪ್ರಸಾದ ಪ್ರೌಢಶಾಲೆಯ ಎಲ್ಲಾ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಊರನಾಗರಿಕರು ಉಪಸ್ಥಿತರಿದ್ದರು.