ಕುಮಟಾ: ಉತ್ತಮ ಮಳೆಯಾಗುತ್ತಿದ್ದು, ಮುಂಗಾರಿನ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು ತಾಲೂಕಿನಲ್ಲಿ ರೈತರಿಗೆ ಹೆಚ್ಚು ಫಸಲು ಬರುವ ಎಂ.ಓ-೪ ( ಜಯ ಭತ್ತ ) ಬಿತ್ತನೆ ಬೀಜವು ಹೆಚ್ಚು ರೈತರಿಂದ ಬೇಡಿಕೆ ಇರುವ ಹಿನ್ನಲೆ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಕೊರತೆ ಇದ್ದು ಕೃಷಿ ಇಲಾಖೆಯ ಈ ಬಗ್ಗೆ ಕ್ರಮ ಕೈಗೊಂಡು ರೈತರಿಗೆ ಶೀಘ್ರದಲ್ಲಿ ಬೀಜ ಬದಗಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷರಾದ ಭಾಸ್ಕರ ಪಟಗಾರ ಅಧಿಕಾರಿಗೆ ಒತ್ತಾಯಿಸಿದರು. ಕರಾವಳಿ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಸರಕಾರದಿಂದ ಸಿಗುವಂತಹ ಸವಲತ್ತುಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು ಎಂದು ತಿಳಿಸಿದರು.
ಈ ವರ್ಷವೂ ಸಹ ಜಯ ಭತ್ತಕ್ಕೆ ಹೆಚ್ಚಿನ ಬೇಡಿಕೆ ರೈತರಿಂದ ಇದ್ದು ಆದರೆ ನಿರೀಕ್ಷಿಸಿದ ಮಟ್ಟದಷ್ಟು ಪೂರೈಕೆಯಾಗುತ್ತಿಲ್ಲ. ಹೀಗಾಗಿ ರೈತರ ಸಮಸ್ಯೆಗೆ ಪರಿಹಾರ ನೀಡಲು ಕೃಷಿ ಅಧಿಕಾರಿಗಳನ್ನು ಭೇಟಿ ರೈತರಿಗೆ ಉಂಟಾಗುವ ಸಮಸ್ಯೆಯನ್ನು ಗಮನಕ್ಕೆ ತಂದರು. ಈ ವೇಳೆ ಮಾಹಿತಿ ನೀಡಿದ ಕೃಷಿ ಅಧಿಕಾರಿಗಳು ಬೇರೆ ತಳಿಯ ಭತ್ತದ ಬೀಜವು ಸಾಕಷ್ಟು ಲಭ್ಯವಿದ್ದು ಆದರೆ ಜಯ ಭತ್ತ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದು ಕೂಡಲೇ ಸಂಭAಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದು ಪೂರೈಕೆ ಮಾಡಲಾಗುವುದು ಎಂದರು,
ಈ ಸಂಧರ್ಭದಲ್ಲಿ ಸ್ಥಳೀಯ ರೈತರಾದ ನರಸಿಂಹ ಭಟ್ ಮೋಹನ ಗೌಡ, ಬಲೀಂದ್ರ ಗೌಡ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.