ಕುಮಟಾ: ಪ್ರಯೋಗ ಕಿರಣ ಕಾರ್ಯಕ್ರಮ ವಿನೂತನವಾಗಿದ್ದು ಜಿಲ್ಲೆಯಲ್ಲಿ ಪ್ರಥಮವಾಗಿ ಗೋಕರ್ಣ ವಲಯದಿಂದ ಪ್ರಾರಂಭವಾಗಿದೆ. ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಕೂಡಿದ ಕಾರ್ಯಾಗಾರ ಯಶಸ್ವಿಯಾಗಿ ಅದರ ಪ್ರಯೋಜನ ಎಲ್ಲ ಶಿಕ್ಷಕರು ಪಡೆಯುವಂತಾಗಲಿ ಎಂದು ಉಪನಿರ್ದೇಶಕರು(ಅಭಿವೃದ್ಧಿ) ಕುಮಟಾದ ಡಯಟ ಪ್ರಾಂಶುಪಾಲರಾದ ಎನ್.ಜಿ.ನಾಯಕ ಹೇಳಿದರು.
ಅವರು ಡಯಟ್ ಕುಮಟಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪದನಿಮಿತ್ತ ಬ್ಲಾಕ್ ಸಮನ್ವಯಾಧಿಕಾರಿಗಳ ಕಛೇರಿ, ಕುಮಟಾ ಹಾಗೂ ಸೆಕೆಂಡರಿ ಹೈಸ್ಕೂಲ್, ಹಿರೇಗುತ್ತಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ “ಪ್ರಯೋಗ ಕಿರಣ” ಕಾರ್ಯಕ್ರಮ ವಿಜ್ಞಾನದ ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಬೋಧಿಸುವ ಶಿಕ್ಷಕರಿಗೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್ ನಡೆಯುತ್ತಿರುವದಕ್ಕೆ ಸಂತಸ ವ್ಯಕ್ತಪಡಿಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ಮಾತನಾಡಿ “ನಮ್ಮ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ, ಉತ್ತಮ ಆಡಳಿತ ಮಂಡಳಿಯಿದೆ, ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ನಮ್ಮ ಪ್ರಯೋಗಾಲಯ ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿದೆ. ಅದರ ಸಂಪೂರ್ಣ ಪ್ರಯೋಜನ ಪಡೆಯಿರಿ” ಎಂದರು.
ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಾಂತಾ ಎನ್.ನಾಯಕ ಮಾತನಾಡುತ್ತ 5ನೇ ತರಗತಿಯಿಂದ 7ನೇ ತರಗತಿಯವರೆಗೆ ವಿಜ್ಞಾನ ಪ್ರಯೋಗಗಳನ್ನು ಮಾಡಿತೋರಿಸುವದರಿಂದ ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುತ್ತಾರೆ” ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮನ್ವಯಾಧಿಕಾರಿ (ಬಿ.ಆರ್.ಸಿ.)ಕುಮಟಾ ರೇಖಾ ನಾಯ್ಕ “ಪ್ರಯೋಗ ಕಿರಣ ಎಂಬ ನೂತನ ಕಾರ್ಯಕ್ರಮ ಡಿ.ಎಸ್.ಇ.ಆರ್.ಟಿ ನಿರ್ದೇಶನದಂತೆ, ಡಯಟ ಪ್ರಾಂಶುಪಾಲರ ಸಲಹೆಯಂತೆ ಕುಮಟಾದ ನಾಲ್ಕು ವಲಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದರು.
ಶಾಲಾ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಮಾತನಾಡಿ “ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವದು ತುಂಬಾ ಸಂತಸ. ಅದಕ್ಕೆ ಪೂರಕವಾದ ಎಲ್ಲ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಿದ್ದೇವೆ” ಎಂದರು.
ಆಡಳಿತ ಮಂಡಳಿಯವರು ಶಾಲೆಗೆ ನೀಡಿದ 2 ಕಂಪ್ಯೂಟರ್ ಹಾಗೂ ಒಂದು ಕಪಾಟ ಉದ್ಘಾಟಿಸಿದ ಮಹನೀಯರು ಕಾರ್ಯಕ್ರಮದಲ್ಲಿ ಸ್ಪಂದನ ಪೌಂಡೇಶನ್ ನೀಡಿರುವ 16 ಸಾವಿರ ರೂಪಾಯಿ ಮೌಲ್ಯದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪಟ್ಟಿಯನ್ನು ವಿತರಿಸಿದರು.
ಉದ್ದಂಡ ಗಾಂವಕರ ನಿವೃತ್ತ ಮುಖ್ಯಾಧ್ಯಾಪಕರು ನೀಡಿರುವ ಗ್ರಾಮರ್ ಪುಸ್ತಕ ವಿತರಿಸಿದರು. ವಿದ್ಯಾರ್ಥಿಗಳ ಕಲಿಕೆಗಾಗಿ ಪುಸ್ತಕ ನೀಡಿದ್ದಕ್ಕೆ ಶುಭ ಕೋರಿದರು.
ವೇದಿಕೆಯಲ್ಲಿ ಶ್ರೀಕಾಂತ ನಾಯಕ ಉಪಾಧ್ಯಕ್ಷರು, ಉದ್ದಂಡ ಗಾಂವಕರ ನಿವೃತ್ತ ಮುಖ್ಯಾಧ್ಯಾಪಕರು, ದೀಪಾ ಕಾಮತ ಇ.ಸಿ.ಓ ಗೋಕರ್ಣ ವಲಯ, ವಿಜಯಲಕ್ಷ್ಮಿ ಹೆಗಡೆ ಬಿ.ಆರ್.ಪಿ. ಗೋಕರ್ಣ ವಲಯದ ಎಲ್ಲಾ ಸಿ.ಆರ್.ಪಿಗಳು, ಗೋಕರ್ಣ ವಲಯದ ಎಲ್ಲಾ ಪ್ರಾಥಮಿಕ ವಿಜ್ಞಾನ ಶಿಕ್ಷಕರು, ಹೈಸ್ಕೂಲ್ ಶಿಕ್ಷಕ ವೃಂದದವರು ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಪ್ರಯೋಗಾಲಯದಲ್ಲಿ “ಪ್ರಯೋಗ ಕಿರಣ” ಕ್ಕೆ ಚಾಲನೆ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹಾದೇವ ಬಿ. ಗೌಡ, ನಿವಾಸ ನಾಯಕ ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಸೇರಿ ಪ್ರಯೋಗವನ್ನು ಕೈಗೊಳ್ಳಲಾಯಿತು. ಹೀಗೆ 37 ಪ್ರಯೋಗಗಳನ್ನು ಶಿಕ್ಷಕರ ಅರಿವಿಗೆ ಬರುವಂತೆ ಸರಳ ವಿಧಾನದಲ್ಲಿ ಮಾಡಿ ತೋರಿಸಲಾಯಿತು.
ಪ್ರಯೋಗ ಕಿರಣ ಕಾರ್ಯಕ್ರಮ ಯಶಸ್ವಿಯಾದ ಕುರಿತು ವಿಜಯಲಕ್ಷ್ಮಿ ಹೆಗಡೆ ಬಿಆರ್‍ಪಿ.(ಬಿಆರ್‍ಸಿ.) ಇವರು ಸಂಪನ್ಮೂಲ ವ್ಯಕ್ತಿಗಳು ಕೈಗೊಂಡಿರುವ ಪ್ರಯೋಗ ಉತ್ತಮವಾಗಿದ್ದು ಅವರ ಪೂರ್ವ ತಯಾರಿ ಕುರಿತು ಹೆಮ್ಮೆ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಸಹಕರಿಸಿದ ಆಡಳಿತ ಮಂಡಳಿಯವರಿಗೆ, ಮುಖ್ಯಾಧ್ಯಾಪಕರಿಗೆ, ಶಾಲೆಯ ಶಿಕ್ಷಕ ವೃಂದಕ್ಕೆ, ಸಹಕರಿಸಿದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ, ಇಲಾಖೆಯ ಅಧಿಕಾರಿಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು.