Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಗ್ರಾಮೀಣ ಭಾಗವೂ ಅಭಿವೃದ್ದಿಯಾದರೆ, ದೇಶವೂ ಅಭಿವೃದ್ದಿಯಾಗಲು ಸಾಧ್ಯ ರಾಜುಮಾಸ್ತಿಹಳ್ಳ

ಕುಮಟಾ:  ಗ್ರಾಮ, ತಾಲೂಕು ಹಾಗೂ ಜಿಲ್ಲೆಯು, ರಾಜ್ಯ ಅಭಿವೃದ್ದಿ ಹೊಂದಿದ್ರೆ ಮಾತ್ರ ರಾಷ್ಟವೂ ಅಭಿವೃದ್ದಿ ಹೊಂದಿದ ರಾಷ್ಟದ ಸಾಲಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರು ಹಾಗೂ ಕುಮಟಾ ಕೊ- ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ರಾಜು ಮಾಸ್ತಿಹಳ್ಳ ಅವರು ಅಭಿಪ್ರಾಯಪಟ್ಟರು. ಅವರು ಡಾ  ಎ.ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಬಿಬಿಎ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ  ೨೦೪೭ರಲ್ಲಿ ಭಾರತ ದೇಶವೂ ಅಭಿವೃದ್ದಿ ಹೊಂದಬಹುದೇ ಎನುವ ವಿಷಯದ ಕುರಿತು ತಾಲೂಕಾ ಮಟ್ಟದ ಚರ್ಚಾ ಸ್ವರ್ದೆಯನ್ನು ಉದ್ಘಾಟಿಸಿ ಮಾತನಾಡಿದರು.  ಇಂದಿನ ದಿನಮಾನಗಳಲ್ಲಿ ಶಿಕ್ಷಣ ಎಲ್ಲಾ ಶಿಕ್ಷಣ ಸಂಸ್ಥೆಗಳು ಉತ್ತಮವಾದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಸರಿಯಾದ ಸಂಸ್ಕಾರಯುತವಾದ ಶಿಕ್ಷಣ ಸಿಕ್ಕಿದಾಗ ಮಾತ್ರ ಭವಿಷ್ಯದಲ್ಲಿ ಉತ್ತಮವಾದ ನಾಗರಿಕರಾಗಲು ಸಾಧ್ಯವಿದೆ.


 ಯುವಕರು ಕಾಲೇಜಿನ ಜೀವನದಲ್ಲಿ ಕೇವಲ ಮೊಬೈಲ್, ಪ್ರೀತಿ ಪ್ರೇಮ ಎಂದು ಕಾಲ ಕಳೆಯದೆ, ಶಿಕ್ಷಣದ ಹಾಗೂ ತಮ್ಮ ಭವಿಷ್ಯದ ಗುರಿಯತ್ತ ಚಿಂತಿಸಿ ಮುನ್ನುಗಬೇಕಿದೆ.ಸರಿಯಾದ ನಾಯಕತ್ವವನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ದೇಶವು ಪ್ರಗತಿಯತ್ತ ಸಾಗಲು ಸಾಧ್ಯವಿದೆ. ರಕ್ಷಣಾತ್ಮಕವಾಗಿ, ಆರ್ಥಿಕವಾಗಿ, ವಿಜ್ಞಾನ ತಂತ್ರಜ್ಞಾನದಲ್ಲಿ ಇನ್ನು ಸಾಕಷ್ಟು ಅಭಿವೃದ್ದಿಯಾಗಬೇಕಿದ್ದು, ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳು ಅಭಿವೃದ್ದಿಯಾದರೆ ದೇಶವು ಅಭಿವೃದ್ದಿಯತ್ತ ಸಾಗಬಹುದು


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ರೇವತಿ ಆರ್ ನಾಯ್ಕ ಅವರು ಮಾತನಾಡಿ ಇಂದಿನ ಯುವಕರು ದೇಶದ ನಾಗರಿಕರು, ಅತಿ ಹೆಚ್ಚು ಯುವ ಸಮೂಹವನ್ನು ಹೊಂದಿರುವ ದೆÃಶವೂ ಭಾರತ, ದೇಶದಲ್ಲಿ ಅನೇಕ ನೈಸರ್ಗಿಕವಾದ ದೇಶವಾಗಿದ್ದು, ಆರ್ಥಿಕ ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ಹೇಳಿದರು.

ಪ್ರಥಮ ದ್ವಿತೀಯ ತೃತೀಯ ಬಹುಮಾನ ಹಾಗೂ ಸಂಪೂರ್ಣ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ರಾಜು ಮಾಸ್ತಿಹಳ್ಳ ಅವರು ವಹಿಸಿದರು.
ಕಾರ್ಯಕ್ರಮದ ವೇಧಿಕೆಯಲ್ಲಿ  ಉಪನ್ಯಾಸಕರಾದ ಅರವಿಂದ ನಾಯಕ,  ಬಿ.ಬಿ.ಎ ವಿಭಾಗದ ಮುಖ್ಯಸ್ಥರಾದ ಸಂತೋಷ ಶಾನಭಾಗ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಬಿ.ಎಲ್ ಶ್ರಜನ್ ಹಾಗೂ ಸಿಂಚನ ಗೌಡ ವಹಿಸಿದರು.