Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ

ಕುಮಟಾ: ಶಾಸಕ ದಿನಕರ ಶೆಟ್ಟಿ ಅವರ ಸಹೋದರ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿರುವ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.  ಶಾಸಕ ದಿನಕರ ಶೆಟ್ಟಿ ಸಹೋದರ ಮಧುಕರ ಶೆಟ್ಟಿ ಅವರಿಗೆ ಸಂಬಂದಿಸಿದ ಮನೆ ಇದಾಗಿದ್ದು ಮನೆಯಿಂದ ಹೊರಗೆ ಹೋದ ವೇಳೆ ಗ್ಯಾಸ ಸಿಲಿಂಡರ್ ಲೀಕ್ ಆಗಿತು ಎನ್ನಲಾಗಿದೆ. 


ಬಳಿಕ ಮನೆಗೆ  ಬಂದು ಬಾಗಿಲು ತೆರೆಯುತ್ತಿದ್ದಂತೆ ಸಿಲಿಂಡರ್ ಸ್ಪೋಟಗೊಂಡಿದೆ. ಪಟ್ಟಣದ ಕೊಪ್ಪಳಕರವಾಡಿಯಲ್ಲಿ ನೆಲೆಸಿರುವ ಅವರ ಸಹೋದರ ಮಧುಕರ ಶೆಟ್ಟಿ ಅವರ ಮನೆಯಲ್ಲಿ  ಆಕಸ್ಮಿಕವಾಗಿ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿ ಸಿಲಿಂಡರ್ ಸ್ಪೋಟದಿಂದ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಮನೆಯಲ್ಲಿದ್ದವರು ಹೊರ ಓಡಿ ಬಂದಿದ್ದು ತಕ್ಷಣ ಅಗ್ನಿಶಾಮಕ ಹಾಗೂ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೋಲಿಸರು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಲತಾ ಶೆಟ್ಟಿ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ ಎನ್ನಲಾಗಿದೆ.


 ಬೆಂಕಿಯಿಂದದಾಗಿ ಕೆಲ ಗೋಡೆಗಳಿಗೆ ಹಾನಿ ಉಂಟಾಗಿದ್ದು ಅಡುಗೆ ಮನೆಯಲ್ಲಿನ ಸಾಮಾಗ್ರಿಗಳು ಹಾಗೂ ಪೀಠೋಪಕರಣ, ಟಿವಿ ಸೇರಿದಂತೆ  ಲಕ್ಷಾಂತರ ರೂಪಪಾಯಿ ನಷ್ಟ  ಉಂಟಾಗಿದೆ ಎನ್ನಲಾಗಿದೆ.