ಹೊನ್ನಾವರ: ತಾಲೂಕಿನಲ್ಲಿ ಬಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಭಾಸ್ಕೇರಿ ಹತ್ತಿರದ ವರ್ನಕೇರಿ ಹತ್ತಿರ ಗುಡ್ಡಕುಸಿತ ಸಂಭವಿಸಿದೆ. ದೊಡ್ಡ ಮರ ಹಾಗೂ ಮಣ್ಣು ರಸ್ತೆಗೆ ಬಿದ್ದಿದೆ. ಇದರಿಂದಾಗಿ ಹೊನ್ನಾವರ ಮಾರ್ಗದಿಂದ ಗೇರುಸೊಪ್ಪ, ಸಾಗರ,ಶಿವಮೊಗ್ಗಕ್ಕೆ ಸಾಗುವ ಸಂಚಾರ ಬಂದ್ ಆಗಿದೆ. ವಾರದ ಹಿಂದೆ ಇದೆ ಸ್ಥಳದ ಹತ್ತಿರದಲ್ಲೇ ಗುಡ್ಡ ಕುಸಿತ ಉಂಟಾಗಿ ದೊಡ್ಡ ಬಂಡೆ ಉರುಳಿ ಬಿದ್ದಿತ್ತು.
ಇನ್ನು ಬಿದ್ದ ಮರ ಹಾಗೂ ಮಣ್ಣನ್ನು ತೆಗೆಯಲು ತೊಂದರೆಯಾಗಿದ್ದು ಕಾರ್ಯಾಚರಣೆ ಸಹ ತಡವಾಗುತ್ತಿದ್ದು, ಸದ್ಯ ಈ ಭಾಗದಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೊನ್ನಾವರದಲ್ಲಿ ಮುಂದುವರೆದ ಮಳೆಯಿಂದಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಗುಂಡಬಾಳ ನದಿಯಿಂದಾಗಿ ಪ್ರವಾಹದ ಆತಂಕ ಎದುರಾಗಿದ್ದು, ತಾಲೂಕಿನ ೫ ಗ್ರಾಮಗಳ ಶಾಲೆಗೆ ರಜೆಯನ್ನು ಘೋಷಣೆ ಮಾಡಲಾಗಿದೆ.ಜನತಾ ವಿದ್ಯಾಲಯ ಅನಿಲಗೋಡ್, ಹಿರಿಯಪ್ರಾಥಮಿಕ ಶಾಳೆ ಅನಿಲಗೋಡ, ಗುಂಡಬಾಳ ನಂ-೨ ಗುಂಡಿ ಬೈಲ್ ನಂ-೨ ಹುಡಗೋಡ ಇಟ್ಟಿಹಾದ ಪಬ್ಲಿಕ ಸ್ಕೂಲ್, ಕಿರಿಯ ಪ್ರಾಥಮಿಕ ಶಾಲೆ ಗಂಜಿಕೆರೆ, ಈ ಶಾಲೆಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶಿಸಿದ್ದಾರೆ.