ಕುಮಟಾ: ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಅವರು ಸೂರಜ್ ನಾಯ್ಕ ಸೋನಿ ಗೆಳೆಯರ ಬಳಗದ ಸಹಕಾರದೊಂದಿಗೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರವಾಹದಿಂದ ಸಂತ್ರಸ್ಥರ ನೆರವಿಗೆ ತೆರೆಯಲಾದ ಕಾಳಜಿ ಕೇಂದ್ರಗಳ ನೆರೆ ಸಂತ್ರಸ್ಥರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಳಜಿ ಕೇಂದ್ರಗಳಾದ ಕೆಕ್ಕಾರ, ನವಿಲಗೋಣ, ಮಾಡಗೇರಿ, ಕೋನಳ್ಳಿ, ಹೀರೆಕಟ್ಟು, ಕಲ್ಕಟ್ಟಿ ಹಾಗೂ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ನಿರಾಶ್ರಿತರಿಗೆ ಬೇಕಾದ ಬೇಡಶೀಟ್, ಟಾವೆಲ್, ಬಿಸ್ಕತ್ ಸೇರಿ ಅಗತ್ಯ ತುರ್ತು ವಸ್ತುಗಳನ್ನು ನೀಡಿ ಸಾಂತ್ವನ ಹೇಳಿದರು. ಈ ವೇಳೆ ಸೂರಜ್ ನಾಯ್ಕ ಸೋನಿ ಮಾತನಾಡಿ ತಾಲೂಕಿನಾದ್ಯಂತ ಸುರಿದ ಬಾರಿ ಮಳೆಯಿಂದಾಗಿ ನೀರು ನುಗ್ಗಿ ಹಾನಿ ಸಂಭವಿಸಿದೆ.ನೆರೆಗೆ ತುತ್ತಾದ ಸಂತ್ರಸ್ಥರಿಗೆ ಅನುಕೂಲವಾಗಲೆಂದು ದಿನ ಬಳಕೆಯ ಸಾಮಾಗ್ರಿಗಳನ್ನು ಸಂತ್ರಸ್ಥರಿಗೆ ನೀಡಲಾಗಿದೆ. ನೆರೆ ಸಂದರ್ಭದಲ್ಲಿ ಸಂತ್ರಸ್ಥರಿಗೆ ಸಾಂತ್ವನಕ್ಕಿಂತ ಸಹಾಯ ಮುಖ್ಯವಾಗಿರುತ್ತದೆ. ಹೀಗಾಗಿ ನನ್ನ ಕ್ಷೇತ್ರ ವ್ಯಾಪ್ತಿಯ ನೆರೆ ಸಂತ್ರಸ್ಥರಿಗೆ ಸಾಮಗ್ರಿ ಕಲ್ಪಿಸಿ ಧೈರ್ಯ ತುಂಬಿದ್ದೇನೆ ಎಂದರು.
ಈ ಸಂಧರ್ಭದಲ್ಲಿ ಸೂರಜ್ ನಾಯ್ಕ ಸೋನಿ ಗೆಳೆಯರ ಬಳಗದ ಸದಸ್ಯರು ಇದ್ದರು.