ಕುಮಟಾ: ಜಿಲ್ಲೆಯಾದ್ಯಂತ ಬಹುತೇಕ ಕಡೆಯಲ್ಲಿ ತಡರಾತ್ರಿಯಿಂದಲೂ ಸತತವಾಗಿ ಸುರಿದ ಬಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಬಾರಿ ಮಳೆಯಿಂದಾಗಿ, ಕತಗಾಲಿನ ಚಂಡಿಕಾ ಹೊಳೆಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಶಿರಸಿ ಕುಮಟಾ ರಸ್ತೆಯ ಮಾರ್ಗವಾದ ಕತಗಾಲನ ಚಂಡಿಕಾ ಹೊಳೆಯ ಬಳಿ ರಸ್ತೆಯ ಮೇಲೆ ನೀರು ತುಂಬಿಕೊಂಡು ಸಂಚಾರ ಬಂದ್ ಆಗಿದೆ.
ಇನ್ನು ಇದೆ ಮಾರ್ಗದಲ್ಲಿ ಸಂಚರಿಸುತ್ತಿರುವ ಶ್ರೀಕುಮಾರ ಬಸ್ ನೀರಿನ ಮಧ್ಯೆ ಸಿಲುಕಿಕೊಂಡಿದ್ದು ಪ್ರಯಾಣಿಕರು ಬಚಾವ್ ಆಗಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಗಜಾನನ ಪೈ ಹಾಗೂ ಅಳಕೋಡ ಗ್ರಾ.ಪಂ ಸದಸ್ಯರು, ಜನರ ಕಷ್ಟಕ್ಕೆ ನೆರವಾದರು.
ಇನ್ನು ಕುಮಟಾ ಭಾಗದ ದಿವಗಿಯ ಬಳಿ ಅಘನಾಶಿನಿ ನದಿಯು ತುಂಬಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇನ್ನು ಬರ್ಗಿಯಲ್ಲಿ ಮಳೆಯಿಂದಾಗಿ ಗುಡ್ಡದಿಂದ ಹರಿದುಬಂದ ನೀರು ರಾಷ್ಟಿಯ ಹೆದ್ದಾರಿ ೬೬ ಪಕ್ಕದಲ್ಲಿರುವ ತಗ್ಗು ಪ್ರದೇಶಕ್ಕೆ ನೀರು ಹೊಕ್ಕಿದ್ದು ಬರ್ಗಿ ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.