ಕುಮಟಾ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಗುಡ್ಡಕುಸಿತ ಮುಂದುವರೆದಿದೆ.ಅಂಕೋಲಾದ ಶಿರೂರು, ಕುಮಟಾದ ಬರ್ಗಿ ನಂತರ ಇದೀಗ ಸಿದ್ದಾಪುರ ಕುಮಟಾ ಮಾರ್ಗವು ಗುಡ್ಡ ಕುಸಿತದಿಂದ ಬಂದ್ ಆಗಿದೆ.
ಸಿದ್ದಾಪುರ ಕುಮಟಾ ಮಾರ್ಗವು ಉಳ್ಳೂರಮಠ ಕ್ರಾಸ್ ಬಳಿ ಸುಮಾರು ಮುಕ್ಕಾಲು ಕಿಲೋಮಿಟರ್ ದೂರದಿಂದ ಗುಡ್ಡ ಕುಸಿದು ಬಂದು ರಸ್ತೆಯ ಮೇಲೆ ಬಿದ್ದಿದೆ ಹಾಗೂ ಮತ್ತೂ ಗುಡ್ಡ ಕುಸಿಯುತ್ತಲೇ ಎಂದು ತಿಳಿಸಿದ್ದಾರೆ, ಅಲ್ಲಿಯೇ ಇರುವ ಪ್ರತ್ಯಕ್ಷದರ್ಶಿ ಹೇಳುತ್ತಿದ್ದಾರೆ.
ಇದರಿಂದ ಸುತ್ತಮುತ್ತಲಿನಲ್ಲಿ ವಾಸವಾಗಿರುವ ಜನರಿಗೆ ಆತಂಕಕ್ಕೆ ಕಾರಣವಾಗಿದೆ.
ಇದರ ಬಗ್ಗೆ ಸ್ಥಳೀಯರಾದ ವಿನಾಯಕ ಭಟ್ಟ ಅವರು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿದ್ದಾರೆ.