ಕುಮಟಾ: ತಾಲೂಕಿನ ಅಘನಾಶೀನಿಯ ಸಮುದ್ರ ಬಳಿ ಮೀನುಗಾರಿಕೆಯ ಚಟುವಟಿಕೆಯನ್ನು ಅಗಸ್ಟ 29 ರಂದು ತೊಡಗಿಕೊಂಡಾಗ ಸಾವನಪ್ಪಿದ ತಾಲೂಕಿನ ಕಾಗಲ್ ಮೀನುಗಾರಾದ ವಿನೋದ ಶಂಕರ ಅಂಬಿಗ ಅವರ ಕುಟುಂಬಕ್ಕೆ ರಾಜ್ಯದ ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳು ವೈದ್ಯ ಮೃತರ ಕುಟುಂಬಸ್ಥರಿಗೆ 8 ಲಕ್ಷ ಪರಿಹಾರ ಆದೇಶ ಪತ್ರವನ್ನು ವಿತರಣೆ ಮಾಡಿದರು ಹಾಗೂ ವೈಯಕ್ತಿಕವಾಗಿ 50,000 ನೇರವು ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಕುಮಟಾ ಅಧ್ಯಕ್ಷರಾದ ಭುವನ್ ಭಾಗ್ವತ, ಮುಖಂಡರಾದ ಹೊನ್ನಪ್ಪ ನಾಯಕ, ಅಶೋಕ ಗೌಡ, ಗ್ರಾ.ಪಂ ಸದಸ್ಯರಾದ ಶಶಿಕಾಂತ ನಾಯ್ಕ , ಪ್ರಶಾಂತ ಶೆಟ್ಟಿ, ನಾಗರಾಜ ನಾಯ್ಕ ಸೇರಿದಂತೆ ಇತರಿದ್ದರು.