Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಅರುಣೋದಯ ಸಂಸ್ಥೆಯಿಂದ ನೀಡುವ ಪ್ರಶಸ್ತಿಗೆ ಜಿಲ್ಲೆಯ ನಾಲ್ವರು ಶಿಕ್ಷಕರು ಆಯ್ಕೆ

ಶಿರಸಿ: ಅರುಣೋದಯ ಸಂಸ್ಥೆಯವರು ಜಿಲ್ಲಾಮಟ್ಟದ ಉತ್ತಮ ಶಿಕ್ಷಕರಿಗಾಗಿ ನೀಡುತ್ತಿರುವ ಈ ಸಾಲಿನ “ಪಾಂಡುರಂಗ” ಪ್ರಶಸ್ತಿಗೆ ಶ್ರೀ ನಾರಾಯಣ ಬಿ. ನಾಯ್ಕ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮನಬೈಲ್, ತಾಲೂಕು ಶಿರಸಿ (ಉ.ಕ), ಶ್ರೀ ಮಹೇಶ ಎಮ್ ಅಡೇಮನೆ, ದೈಹಿಕ ಶಿಕ್ಷಕರು ಮಾಧ್ಯಮಿಕ ಶಿಕ್ಷಣಾಲಯ ನೀರ್ನಳ್ಳಿ, ತಾಲೂಕ ಶಿರಸಿ (ಉ.ಕ.), ಶ್ರೀಮತಿ ಸುಧಾ ನಾರಾಯಣ ಭಂಡಾರಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಖರ್ವಾ, ತಾಲೂಕ ಹೊನ್ನಾವರ (ಉ.ಕ.) ಹಾಗೂ ಶ್ರೀ ಸುದಾಮ ರಾಮಕೃಷ್ಣ ಪೈ, ದೈಹಿಕ ಶಿಕ್ಷಕರು, ಸರ್ಕಾರಿ ಫ್ರೌಡ ಶಾಲೆ, ದೇವನಳ್ಳಿ, ತಾಲೂಕು ಶಿರಸಿ (ಉ.ಕ) ಇವರನ್ನು ಆಯ್ಕೆ ಮಾಡಲಾಗಿದೆ.


 ಶಿಕ್ಷಣ ಕ್ಷೇತ್ರದಲ್ಲಿ ಇವರ ಗಮನಾರ್ಹ ಸೇವೆಯನ್ನು ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶ್ರೀಯುತರು ತೋರುತ್ತಿರುವ ವಿಶೇಷ ಕಾಳಜಿಯನ್ನು ಪರಿಗಣಿಸಿ ಅವರನ್ನು ‘ಪಾಂಡುರಂಗ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅರುಣೋದಯ ಸಂಸ್ಥೆಯವರು ಶಿಕ್ಷಕರಾಗಿದ್ದ ಪಾಂಡುರಂಗ ಬಿ. ನಾಯ್ಕ ಇವರ ಹೆಸರಿನಲ್ಲಿ ಕಳೆದ 17 ವರ್ಷಗಳಿಂದ ಜಿಲ್ಲೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಅವರನ್ನು ಶಿಕ್ಷಕರ ದಿನಾಚರಣೆಯಂದು ಗೌರವಿಸುತ್ತಾ ಬಂದಿರುತ್ತಾರೆ.
ಈ ಪ್ರಶಸ್ತಿಯನ್ನು ಶಿರಸಿಯಲ್ಲಿ ದಿನಾಂಕ 05/09/2024 ರಂದು ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಪ್ರಧಾನ ಮಾಡಲಾಗುತ್ತದೆ ಎಂದು ಅರುಣೋದಯ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.