Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಪ್ರವಾಸಿ ತಾಣಕ್ಕೆ ಶಾಸಕ ದಿನಕರ ಶೆಟ್ಟಿ ಭೇಟಿ...ಅಲ್ಲಿನ ಕುಂದುಕೊರತೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ

ಕುಮಟಾ: ಶಾಸಕ ದಿನಕರ ಶೆಟ್ಟಿ ಅವರು ಪ್ರವಾಸಿ ತಾಣ ಯಾಣಕ್ಕೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ವೇಳೆ ರಸ್ತೆ ನಡುವೆ  ಇರುವ ಮರದ ದಿಮ್ಮಿಗಳನ್ನು ತೆರವು ಮಾಡಲು ಅರಣ್ಯ ಇಲಾಖೆಯವರಿಗೆ ಸೂಚನೆ ನೀಡಿದ ಅವರು, ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿ ಎಂದು ಹೇಳಿದರು. 
ಯಾಣದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಕೈಗೋಳ್ಳಲಾಗಿದೆ. ಆದರೆ ಪ್ರಸಕ್ತ ವರ್ಷ ಭಾರಿ ಮಳೆಯಿಂದಾಗಿ  ಬಹಳಷ್ಟು ಹಾನಿ ಸಂಭವಿಸಿದೆ. ಆದರೆ  ಈಗ ತುರ್ತು ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ ೨೦೦ ಕೋಟಿ ರೂ ಅನುದಾನದಲ್ಲಿ ೧೦ ಲಕ್ಷ ಅನುದಾನವನ್ನು ಇಲ್ಲಿನ ಅಭಿವೃದ್ದಿಗೆ ನೀಡಿರುವುದು ಸಮಾಧಾನಕರವಾಗಿದೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಜಿ.ಪಂ ಮಾಜಿ ಸದಸ್ಯರಾದ ಗಜಾನನ ಪೈ, ಸದ್ಯದಲ್ಲೇ ರೋಪ್ ವೇ ಕಾಮಗಾರಿಯು ಪ್ರಾರಂಭವಾಗುತ್ತದೆ.ನಾನು ಜನರ ಸಮಸ್ಯೆಗಳಿಗೆ ಸದಾ ನಾನು ಸ್ಪಂದಿಸುತ್ತಿದ್ದೇನೆ. ಭೈರವೇಶ್ವರ ಶಿಖರದ ಕೆಳಗಿನ ಮೆಟ್ಟಿಲುಗಳನ್ನು ಸರಿಪಡಿಸಲು ೧೦ ಲಕ್ಷ ರೂ ಅನುದಾನ ಶಾಸಕರು  ಒದಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ  ಗ್ರಾ.ಪಂ ಸದಸ್ಯರು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಪಿಡಬ್ಲ್ಯೂಡಿ ಇಲಾಖೆಯವರು ಮತ್ತು ಊರ ನಾಗರಿಕರ ಹಾಜರಿದ್ದರು.