ಕುಮಟಾ:ಇದುವರೆಗೆ ಕೋವಿಡ್ ಲಸಿಕೆ ಪಡೆಯದೆ ಇದ್ದಂತಹ 18 ವರ್ಷ ಮೆಲ್ಪಟ್ಟವರು ಹಾಗೂ ಎರಡನೇ ಲಸಿಕೆ ಪಡೆಯಲು ಅವಧಿ ಪೂರೈಸಿರುವ ಎಲ್ಲರಿಗೂ ಸರ್ಕಾರದಿಂದ ಲಸಿಕೆಯನ್ನು ಪಡೆದುಕೊಳ್ಳಲು ಕಡ್ಡಾಯಗೊಳಿಸಲಾಗಿದೆ. ಯಾರಾದರೂ ಪಡೆಯದೆ ಇದ್ದವರು ದಿನಾಂಕ 17 ಸಪ್ಟೆಂಬರ್ 2021 ರಂದು ಕುಮಟಾ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಒಟ್ಟು 36 ಕೇಂದ್ರಗಳಲ್ಲಿ ಲಸಿಕಾ ಮಹಾಮೇಳ ನಡೆಯಲಿದೆ.
ಕುಮಟಾ ಪಟ್ಟಣದ ಚಿತ್ರಗಿ, ಹಿರಿಯ ಪ್ರಾಥಮಿಕ ಶಾಲೆ, ಪುರಭವನ, ಹೆಗಡೆ ಸರ್ಕಲ್ ತಾಲೂಕು ಆಸ್ಪತ್ರೆ, ವಾಳ್ಕೆ ಸಭಾಭವನ ಹೊನ್ಮಾಂವ್‌ದಲ್ಲಿ ಕೋವಿಡ್ ಲಸಿಕೆ ಲಭ್ಯವಿರುತ್ತದೆ. ದಿನಾಂಕ 17 ಸಪ್ಟೆಂಬರ್‌ನ ಬೆಳಿಗ್ಗೆ 9:30ರಿಂದ ಮದ್ಯಾಹ್ನ 4 ಗಂಟೆಯವರೆಗೆ ಲಸಿಕೆ ಪಡೆದುಕೊಳ್ಳಲು ಅವಕಾಶ ಲಭ್ಯವಿರುತ್ತದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡು ಮೂರನೇ ಹಂತದ ಕರೋನಾ ತಡೆಗಟ್ಟುವಲ್ಲಿ ಸಹಕರಿಸುವಂತೆ ಕೊರಲಾಗಿದೆ. ಇದು ಕುಮಟಾ ಪುರಸಭೆ ಹಾಗೂ ಆರೋಗ್ಯ ಇಲಾಖೆಯ ಜಂಟಿ ಸಾರ್ವಜನಿಕ ಪ್ರಕಟಣೆಯಾಗಿರುತ್ತದೆ.