Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಮೇಲಾಧಿಕಾರಿಗಳ ಹೆಸರು ದುರ್ಬಳಕೆ ಮಾಡಿ, ಹಣ ಕೇಳಲು ಬಂದ ಸಿಬ್ಬಂದಿಗಳಿಗೆ ‌ಸೂಕ್ತ ಕಾನೂನಿನ ಕ್ರಮ: ಎಸ್ಪಿ ಶಿವಪ್ರಕಾಶ ದೇವರಾಜು ಖಡಕ್ ಎಚ್ಚರಿಕೆ

ಕಾರವಾರ : ಇತ್ತೀಚಿನ ದಿನಗಳಲ್ಲಿ ಕೆಲವು ಪೊಲೀಸರು, ಮಾಧ್ಯಮದವರು ಸೇರಿದಂತೆ ಕೆಲವರು ಮೇಲಾಧಿಕಾರಿಗಳ ಹೆಸರಲ್ಲಿ ಹಣ ವಸೂಲಿ ಮಾಡತ್ತಿದ್ದಾರೆ ಎನ್ನುವ ಬಗ್ಗೆ ನಮ್ಮಗೂ ಸಾಕಷ್ಟು ಆರೋಪಗಳು ಕೇಳಿ ಬರತ್ತಾ ಇದೆ. ಅಂತಹ ಘಟನೆಗಳು ನಡೆಯುತ್ತಿರುವ ಬಗ್ಗೆ ಯಾರದೆ ಗಮನಕ್ಕೆ ಬಂದರೂ ಸಹ ಅದನ್ನ ನಮ್ಮ ಗಮನಕ್ಕೆ ತರಬೇಕು. ಅವರು ಯಾರೆ ಆಗಿದ್ರೂ ಕೂಡ ಅಂತಹವರ ವಿರುದ್ಧ ಕಠಿಣ ಕ್ರಮ ತೆಗದೊಳ್ಳಲಾಗುವುದು.
ಈ ರೀತಿಯಾಗಿ ಯಾರಾದ್ರೂ ಬಂದು ಬೇರೆ ಬೇರೆ ವ್ಯವಹಾರ ಮಾಡುವವರಲ್ಲಿಗೆ ಬಂದು ಮೇಲೆಧಿಕಾರಿಗಳ ಹೆಸರನ್ನ ಹೇಳಿಕೊಂಡು ಹಣ ವಸೂಲಿ ಮಾಡುವುದು ತಮ್ಮ ಗಮನಕ್ಕೆ ಬಂದರೆ ನೇರವಾಗಿ ನಮ್ಮ ಪೋನ್ ಮಾಡಿ ಮಾಹಿತಿಯನ್ನ ನೀಡಬಹುದು. ಯಾರೂ ಕೂಡ ಅದನ್ನ ಮುಚ್ಚು ಮರೆ ಮಾಡೋದು ಬೇಡ. ಪೊಲೀಸ್ ಇಲಾಖೆ ಇರುವುದು ಜನರ ರಕ್ಷಣೆಗಾಗಿ. ಸರಕಾರ ಎಲ್ಲಾರೀತಿಯಾಗಿರುವ ಸವಲತ್ತುಗಳನ್ನ ನಮ್ಮ ಪೊಲೀಸ್ ಇಲಾಖೆಗೆ ನೀಡಿದೆ.ಯಾರ ಬಳಿಯೂ ಹಣ ತೆಗದುಕೊಂಡು ಬನ್ನಿ ಅಂತಾ ನಾವಂತೂ ಯಾರಿಗೂ ಹೇಳಲ್ಲ. ಅದರ ಅವಶ್ಯಕತೆ ಇಲ್ಲ. ಆದ್ರೆ ಮೇಲಾಧಿಕಾರಿಗಳ ಹೆಸರಲ್ಲಿ ಲೂಟಿ ನಡೆಸಲಾಗುತ್ತಿದೆ ಎನ್ನುವುದು ಈಗಾಗಲೇ ಸಾಕಷ್ಟು ಜನ್ರು ನಮ್ಮ ಮಾಹಿತಿ ನೀಡಿದ್ದಾರೆ. ಸರಿಯಾದ ಸಾಕ್ಷ್ಯ ಸಿಕ್ಕದ್ರೆ ಯಾರೆ ಆಗಿದ್ರು ಕ್ರಮ ತೆಗದಕೊಳ್ಳತ್ತೀನಿ ಅಂತಾ ಉತ್ತರಕನ್ನಡ ಜಿಲ್ಲಾಪೊಲೀಸ ವರಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ತಿಳಿಸಿದ್ದಾರೆ.