Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಬೈಕ್ ಕಳ್ಳತನ ಮಾಡಿದ ಆರೋಪಿಯ ಬಂಧನ:

ಕುಮಟಾ: ಬೈಕ್  ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ. 
ಕಳ್ಳತನ ಮಾಡಿದ ಆರೋಪಿಯನ್ನು ಕಾರವಾರ ಶಿರವಾಡದ ಆನಂದ (19 ವರ್ಷ) ಎಂದು ತಿಳಿದುಬಂದಿದೆ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.

ಬೆಂಗಳೂರಿನಿಂದ ಪ್ರವಾಸಕ್ಕೆ ಹೊರಟ ಯುವಕರ ತಂಡ ಬೈಕ್ ನಲ್ಲಿ ಕೇರಳವನ್ನೆಲ್ಲಾ ಸುತ್ತಾಡಿ ಗೋಕರ್ಣಕ್ಕೆ ತೆರಳುವ ಉದ್ದೇಶದೊಂದಿಗೆ ಕುಮಟಾಕ್ಕೆ ಆಗಮಿಸಿ, ಇಲ್ಲಿನ ಸನ್ಮಾನ ಲಾಡ್ಜ್ ನಲ್ಲಿ ತಂಗಿದ್ದರು. ಆದರೆ ರಾತ್ರಿರೋತ್ರಿ ತಾಲೂಕಿನ ಲಾಡ್ಜ್ ನಿಲ್ಲಿಸಿದ್ದ ಈ ದುಬಾರಿ ಬೈಕ್‌ ಕಳ್ಳತನವಾಗಿತ್ತು.
 ಈ ಬಗ್ಗೆ ಪ್ರವಾಸಿಗ ಬೈಕ್ ಗುರುತು ತಿಳಿಸಿದವರಿಗೆ ಬಹುಮಾನ ನೀಡುವುದಾಗಿಯೂ ಹೇಳಿದ್ದರು, ಅದಲ್ಲದೆ ಪ್ರಕರಣ ಕೂಡಾ ದಾಖಲಾಗಿತ್ತು. ಇದೀಗ   ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಳ್ಳತನ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಕುಮಟಾ ಠಾಣೆಯ ಪಿ.ಎಸ್.ಐ ರವರುಗಳಾದ ಆನಂದಮೂರ್ತಿ, ರವಿ ಗುಡ್ಡಿ, ಚಂದ್ರಮತಿ ಪಟಗಾರ ಹಾಗೂ ಸಿಬ್ಬಂದಿಯವರಾದ ಸಿಹೆಚ್‌ಸಿ-
ದಯಾನಂದ ನಾಯ್ಕ, ಸಿಹೆಚ್‌ಸಿ ಗಣೇಶ ನಾಯ್ಕ, ಸಿಪಿಸಿ- ಸಂತೋಷ ಬಾಳೇರ, ಸಿಪಿಸಿ- ಕೃಷ್ಣ ಎನ್, ಜೆ, ಸಿಪಿಸಿ- ಬಸವರಾಜ ಜಾಡರ, ಮಾರುತಿ ಗಾಳಪೂಜಿ, ಇವರುಗಳ ತಂಡ ಪ್ರಮುಖ ಪಾತ್ರ ವಹಿಸಿದೆ.