ಹೊನ್ನಾವರ:ಉತ್ತರಕನ್ನಡ ಜಿಲ್ಲೆಯ ವಿವಿಧೆಡೆ ಗೋ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಆರುಮಂದಿ ಆರೋಪಿಗಳನ್ನ ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಹೊನ್ನಾವರ ತಾಲೂಕಿನ ಮಂಕಿ , ಹಾಗೂ ಗುಣವಂತೆ ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ ಗೋ ಕಳ್ಳತನ ಮಾಡಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಈ ಬಗ್ಗೆ ಸ್ಥಳೀಯರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರನ್ನ ಸಹ ದಾಖಲಿಸಿದ್ರು. ದೂರಿನ ಮೇಲೆ ತನಿಖೆ ನಡೆಸಿದ ಪೊಲೀಸರು ಉಡುಪಿಯ ಇಬ್ಬರೂ, ಭಟ್ಕಳದ ನಾಲ್ವರು ಹಾಗೂ ಕಾರು ಚಾಲಕ ಓರ್ವನ ಸೇರಿ ಆರು ಮಂದಿಯನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಉಡುಪಿಯ ವಾಜಿದ್, ದೃಶ್ಯ ಮೆಂಡನ್, ಭಟ್ಕಳದ ಸಯ್ಯದ್ ಮುಸ್ಸಾ, ಮಹಮ್ಮದ್ ಫಯಾಜ್, ಪ್ರವಣ್ ಶೇಟ್,ಮಹಮ್ಮದ್ ಇಬ್ರಾಹಿಂ ಎಂಬುವವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.