ಕಾರವಾರ: ಕೊರೊನಾ ಕಾರಣದಿಂದಾಗಿ ಗೋವಾ-ಕರ್ನಾಟಕ ಗಡಿ ಭಾಗವಾದ ಕಾರವಾರ ಮಾಜಾಳಿಯಲ್ಲಿ ಕೊವಿಡ್ ನೆಗೆಟಿವ್ ದಾಖಲಾತಿಗಳ ತಪಾಸಣೆ ನಡೆಸಲಾಗುತ್ತಿದೆ.
ಜೊತೆಗೆ ಕೇರಳ ಹಾಗೂ ಮಹಾರಾಷ್ಟದಲ್ಲಿ ಡೆಲ್ಟಾ ಪ್ಲಸ್ ಅಬ್ಬರ ಜೋರಾದ ಕಾರಣ ರಾಜ್ಯ ಪ್ರವೇಶಿಸುವ ಪ್ರತಿಯೊಬ್ಬರಿಗೂ ಎರಡು ಡೋಸ್ ಇಲ್ಲವೇ 72 ಗಂಟೆಗಳ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ.
ಇದೀಗ ಮೂರನೇ ಅಲೆ ಅಬ್ಬರದಿಂದಾಗಿ ಗಡಿಯಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ಮತ್ತಷ್ಟು ಕಟ್ಟುನಿಟ್ಟಿನ ತಪಾಸಣೆಗೆ ಸೂಚನೆ ಕೂಡ ನೀಡಿದೆ. ಅದರಂತೆ ತಡರಾತ್ರಿ ವೇಳೆ ಗೋವಾದಿಂದ ರಾಜ್ಯದ ಗಡಿಪ್ರವೇಶಿಸಲು ಬಂದವರನ್ನು ಮಾಜಾಳಿ ಕೊರೊನಾ ತಪಾಸಣೆ ಕೇಂದ್ರದಲ್ಲಿ ತಡೆದು ಪರಿಶೀಲನೆ ನಡೆಸಿದ್ದು ಕೆಲವರು ಒಂದು ಡೋಸ್ ಲಸಿಕೆ ಮಾತ್ರ ಪಡೆದಿದ್ದರು. ಇನ್ನು ಕೆಲವರ ಬಳಿ ನೆಗೆಟಿವ್ ವರದಿ ಇಲ್ಲದ ಕಾರಣ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ.
ಅದ್ರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಗೋವಾದವರು, ಗಡಿಯಲ್ಲಿ ಪ್ರತಿಭಟನೆ ಕೂಡ ನಡೆಸಿದ್ದರು. ಗೋವಾದವರ ಮನಸ್ಥಿತಿಗೆ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಡಿಸಿದ್ದಾರೆ.