ಹೊನ್ನಾವರ: ತಾಲೂಕಿನ ಗುಣವಂತೆಯ ಮರಿ ಭಟ್ಟರ ಹೊಟೇಲ್ ಹತ್ತಿರ ಐಶಾರಾಮಿ ಕಾರಿನಲ್ಲಿ ಬಂದ ಗೋ ಕಳ್ಳರು ರವಿವಾರ ಬೆಳಗಿನ ಜಾವ 4:30ರ ಸುಮಾರಿಗೆ ಗೋ ಕಳ್ಳತನಕ್ಕೆ ಮುಂದಾಗಿದ್ದಾರೆ. ರಸ್ತೆಯ ಸನಿಹದಲ್ಲಿದ್ದ ಗೋಗಳನ್ನು ಕಾರಿನಲ್ಲಿ ತುಂಬಿಕೊಂಡು ಎಸ್ಕೇಪ್ ಆಗಿದ್ದು, ಈ ಘಟನೆ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ.
ಮಾರುತಿ ಎರ್ಟಿಗಾ ಕಾರಿನಲ್ಲಿ ಬಂದ ನಾಲ್ವರು ಖದಿಮರು ಒಂದು ಕಪ್ಪು ಬಿಳಿ ಬಣ್ಣದ ಆಕಳನ್ನು ಕಾರಿನಲ್ಲಿ ತುಂಬಿ ಕದ್ದೊಯ್ದಿದ್ದಾರೆ.
ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಕ್ರಮ ಗೋ ಮಾಂಸ ಸಾಗಾಟ ಹಾಗೂ ಅಕ್ರಮ ಗೋ ಸಾಗಾಟ ಜಾಲಗಳು ಜಿಲ್ಲೆಯ ಅನೇಕ ಕಡೆಗಳಲ್ಲಿ ನಡೆಯುಡುತ್ತಿದ್ದು, ಇಂತಹ ಕೃತ್ಯದಲ್ಲಿ ತೊಡಗಿಕೊಂಡವರ ಬಂಧನ ಹಾಗೂ ಇಂತಹ ಕಾರ್ಯಾಚರಣೆಗಳು ನಡೆಯುವಾಗ ಪೊಲೀಸ್ ದಾಳಿಗಳು ಸಾಮಾನ್ಯ ಎನ್ನುವಂತಾಗಿದೆ. ಆದರು ಇಂತಹ ಪ್ರಕರಣ ಮತ್ತೆ ಮತ್ತೆ ಪುನರಾವರ್ತನೆ ಮಾಡಿರುವುದು, ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಈ ಕುರಿತಂತೆ ಮಂಜುನಾಥ ಎನ್ನುವವರು ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇನ್ನೂ ಇದೇ ವಿಷಯ ಇಂದಿನ ಕೆಡಿಪಿ ಸಭೆಯಲ್ಲಿ ಪೊಲೀಸ್ ಇಲಾಖೆ ಚರ್ಚೆ ವೇಳೆ ಸದ್ದು ಮಾಡಿದ್ದು ಶಾಸಕ ಸುನೀಲ್ ಗೋ ಕಳ್ಳತನ ಪ್ರಕರಣಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಆರೋಪಿಗಳ ಬಂಧಿಸಿ ಎಂದು ಪಿಎಸೈ ಶಶಿಕುಮಾರ್ ಅವರಿಗೆ ಹೇಳಿದರು