ಕುಮಟಾ:- ಪ್ರವಾಸಕ್ಕೆ ಬಂದು ಸಮುದ್ರಕ್ಕಿಳಿದ ಸಿ.ಎ ಇಂಟ್ರನ್ ಷಿಪ್ ನ ನಾಲ್ಕು ಜನ ವಿದ್ಯಾರ್ಥಿಗಳು ನೀರುಪಾಲಾಗಿ ಸಾವು ಕಂಡ ಘಟನೆ ತಾಲೂಕಿನ ಕಾಗಾಲ್ ಕಡಲತೀರದಲ್ಲಿ ನಡೆದಿದೆ.
ಇಂದು ಬೆಂಗಳೂರಿನಿಂದ 80ಜನ ವಿದ್ಯಾರ್ಥಿಗಳ ತಂಡ ಕುಮಟಾದ ಸಿಲವರ್ ಸ್ಯಾಂಡ್ ರೆಸಾರ್ಟ ನಲ್ಲಿ ಬಂದಿಳಿದಿದ್ದರು.ಸಮುದ್ರಕ್ಕಿಳಿದು ಆಟವಾಡುವಾಗ ಅಲೆಗೆ ನಾಲ್ಕುಜನ ತೇಲಿಹೋಗಿದ್ದರು.
ಬೆಂಗಳೂರು ಮೂಲದ ಸಿ.ಎ ಇಂಟ್ರನ್ ಷಿಪ್ ವಿದ್ಯಾರ್ಥಿಗಳಾದ ಅರ್ಜುನ್ ,ಚೈತ್ರ, ಕಿರಣ್ ,ತೇಜಸ್ ಸಮುದ್ರದ ಅಲೆಗೆ ಸಿಲುಕಿ ಮೃತರಾದವರಾಗಿದ್ದಾರೆ. ಚೈತ್ರ ಮತ್ತು ಅರ್ಜುನ್ ಮೃತ ದೇಹ ಪತ್ತೆಯಾಗಿದ್ದು ಇನ್ನಿಬ್ಬರ ಮೃತ ದೇಹ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ ಕುಮಟಾ ಠಾಣೆ ಪೊಲಿಸರು ಮೊಕ್ಕಾಂ ಹೂಡಿದ್ದು ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.