ಗೋಕರ್ಣ: ಪಶ್ವಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯ ಪ್ರಚಾರದ ಭರಾಟೆ ಗೋಕರ್ಣ ಭಾಗದಲ್ಲಿ ಜೋರಾಗಿತ್ತು, ಬಿಜೆಪಿಯ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಪರ ಜಿಲ್ಲಾ ಹಾಗೂ ಸ್ಥಳೀಯ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಈ ಭಾಗದ ಎಲ್ಲಾ ಪೌಢ ಶಾಲೆಗಳಿಗೆ ತೆರಳಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಿದರು.ತದಡಿ, ಸಾಣಿಕಟ್ಟಾ, ಗೋಕರ್ಣ, ನಾಡುಮಾಸ್ಕೇರಿ,ಬಂಕಿಕೊಡ್ಲ, ವಿವಿಧ ಪ್ರೌಢಶಾಲೆಗಳಿಗೆ ತೆರಳಿ ಶಿಕ್ಷಕರನ್ನು ಭೇಟಿ ಮಾಡಿ ಮತ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಕುಮಟಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ನಾಗರಾಜ ನಾಯಕ ತೊರ್ಕೆ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿ ಬಸವರಾಜ್ ಹೊರಟಿ ಗೆಲುವುದು ಶತಸಿದ್ದ ಆದರೆ, ಎಷ್ಟು ಮತಗಳ ಅಂತರದಲ್ಲಿ ಎನ್ನುವುದು ಅಷ್ಟೆ ಮುಖ್ಯವಾಗಿದೆ, ಅವರ ವಯಕ್ತಿಕವಾದ ವರ್ಚಸ್ಸು ಹಾಗೂ ಬಿಜೆಪಿ ಪಕ್ಷದ ಪರ ಇರುವ ಶಕ್ತಿ ಎಲ್ಲವೂ ಸೇರಿ, ಬಸವರಾಜ್ ಹೊರಟ್ಟಿವರು ಗೆಲ್ಲುತ್ತಾರೆ, ಅವರು ಹ್ಯಾಟ್ರಿಕ್ ಆಗಿ ಏಳನೆ ಬಾರಿ ಗೆದ್ದು ಶಿಕ್ಷಕರ ಸಮಸ್ಯೆಗಳಿಗೆ ದ್ವನಿಯಾಗಿ, ವಿಧಾನಪರಿಷತ್ ಸದಸ್ಯರಾಗಿ ಹಾಗೂ ಸಚಿವರಾಗಿ, ಸಭಾಪತಿಗಳಾಗಿ ಕೆಲಸವನ್ನು ಮಾಡಿದ್ದಾರೆ,
ಮೊದಲು ಅವರು ಜೆಡಿಎಸ್ ಪಕ್ಷದಲ್ಲಿ ಅವರು ಇದ್ದಾಗ ನಾವು ಸೈದಾಂತಿಕವಾಗಿ ವಿರೋಧ ಮಾಡಿದ್ದೇವೆ ಹೊರತು, ವಯಕ್ತಿಕವಾಗಿ ಅಲ್ಲ ಎಂದು ಹೇಳಿದರು.
ಈ ವೇಳೆ ಬಿಜೆಪಿ ಎಂ.ಜಿ.ಭಟ್, ಗೋಕರ್ಣ ಗ್ರಾ.ಪಂ ಅಧ್ಯಕ್ಷರಾದ ಮಂಜುನಾಥ ಜನ್ನು, ಮಾಜಿ ಗ್ರಾಂ.ಪಂ ಅಧ್ಯಕ್ಷರಾದ ನಾಗರಾಜ ಹಿತ್ತಲಮಕ್ಕಿ, ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.