Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ 13 ಕೋಟಿಯ ರಸ್ತೆ ಕಾಮಗಾರಿಯ ಗುಣಮಟ್ಟ ಪರೀಕ್ಷೆಗೆ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಒತ್ತಾಯ

ಕುಮಟಾ: ತಾಲೂಕಿನ. ಕೆಲವು ಗ್ರಾಮೀಣ ಭಾಗದಲ್ಲಿ. ಆರ್ ಡಿ ಪಿ ಆರ್. ವತಿಯಿಂದ ರಸ್ತೆ ಕಾಮಗಾರಿಯು ಲ್ಯಾಂಡ್ ಆರ್ಮಿ ಇಲಾಖೆಯಿಂದ ಗ್ರಾಮೀಣ ಭಾಗದಲ್ಲಿ ೧೩ ಕೋಟಿ ಅಂದಾಜಿನ  ರಸ್ತೆ ಕಾಮಗಾರಿಯು ನಡೆಯುತ್ತಿದ್ದು ರಸ್ತೆಯ ಕಾಮಗಾರಿಯಲ್ಲಿ ಅಗತ್ಯ ಬಿದ್ದಲ್ಲಿ  ಮೋರಿಗಳನ್ನ ಅಳವಡಿಸದೆ, ಹಾಗೂ ಕಾಮಗಾರಿಯ  ಗುಣಮಟ್ಟದಲ್ಲೂ ಕಳಪೆಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇಧಿಕೆಯ ಜಿಲ್ಲಾಧ್ಯಕ್ಷರಾದ ಭಾಸ್ಕರ ಪಟಗಾರ ಅವರು ಕುಮಟಾ ಉಪವಿಭಾಗಾಧಿಕಾರಿ ರಾಹುಲ್ ರತ್ನಂ ಪಾಂಡೆ ಅವರಿಗೆ ಕಾಮಗಾರಿಯ ಗುಣಮಟ್ಟದ ಪರೀಕ್ಷೆ ಹಾಗೂ ಕಾಮಗಾರಿಯ ವೆಚ್ಚದ ಮಾಹಿತಿ ಕುರಿತು ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು ಸರ್ಕಾರದ ಹಣವನ್ನ ಸದುಪಯೋಗ ಪಡಿಸಿಕೊಂಡು. ಕಾಮಗಾರಿಯು ಸಮರ್ಪಕವಾಗಿ ನಿರ್ವಹಣೆ ಯಾದಾಗ ಸಾರ್ವಜನಿಕರಿಗೆ ಅನುಕೂಲಕರವಾಗುತ್ತದೆ. ಲ್ಯಾಂಡ್ ಆರ್ಮಿ ಇಲಾಖೆಯಿಂದ ನಡೆಯುತ್ತಿರುವ ಈ ಕಾಮಗಾರಿಯ ಸಂಪೂರ್ಣ ವೆಚ್ಚದ ಮಾಹಿತಿಯನ್ನು. ಹಾಗೂ ಗುಣಮಟ್ಟದ ಪರೀಕ್ಷೆ ಮಾಡಿ ಸಾರ್ವಜನಿಕರಿಗೆ. ಮನದಟ್ಟು ಮಾಡಿಕೊಡಬೇಕು. ಕಳಪೆ ಯಾದಲ್ಲಿ ಕಾಮಗಾರಿಯ. ಹಣವನ್ನ ಬಿಡುಗಡೆ ಮಾಡದೇ ತಡೆಹಿಡಿಯಬೇಕು. ಈ ಬಗ್ಗೆ ತಾವು ಸಂಬಂಧಪಟ್ಟ ಇಲಾಖೆಗೆ, ಸೂಚಿಸಿ ಕಾಮಗಾರಿಯ ಮಾಹಿತಿ ಪಡೆದು ನ್ಯಾಯ ದೊರಕಿಸಿ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಇಲ್ಲವಾದಲ್ಲಿ ಮುಂದಿನ ದಿನ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಭಾಸ್ಕರ ಪಟಗಾರ ಹೇಳಿದರು.