Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ವಿಶ್ವ ಪರಿಸರ ದಿನ : ಗಿಡ ನೆಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು

ಕುಮಟಾ : ತಾಲೂಕಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅತ್ಯಂತ ಸುಂದರ ರೀತಿಯಲ್ಲಿ ಸಂಯೋಜನೆ ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮನೆಯಿಂದ ಒಂದೊಂದು ಗಿಡ ತಂದು ಶಾಲಾ ಆವರಣದಲ್ಲಿ ನೆಡುವ ಮೂಲಕ ಸಂಭ್ರಮಿಸಿದರು. 
ತಾವು ತಂದು ನೆಟ್ಟ ಗಿಡಗಳನ್ನು ಪ್ರತಿದಿನ ನೀರುಣಿಸಿ ಆರೈಕೆ ಮಾಡುವ ಮೂಲಕ ಅವುಗಳ ರಕ್ಷಣೆ ಮಾಡುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞೆ ಗೈದರು.

ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಆರನೇ ವರ್ಗದ ವಿದ್ಯಾರ್ಥಿಗಳಾದ ನಿತ್ಯಾ ಹೆಗಡೆ, ರಕ್ಷಾ ದಿವಾಕರ್, ಆದಿತಿ ವರ್ಣೇಕರ್, ಕೃತಿಕಾ ನಾಯ್ಕ ವಿಶ್ವ ಪರಿಸರ ದಿನದ ಮಹತ್ವ ಹಾಗೂ ಪರಿಸರದ ಉಳಿವಿಗಾಗಿ ನಾವೆಲ್ಲರೂ ಮಾಡಬೇಕಾದ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿ ಮಾತನಾಡಿದರು. ಐದನೇ ವರ್ಗದ ಪನ್ನಗ, ಪ್ರಣವ, ರೀಷಾ, ಪ್ರತೀಕ, ಕೀರ್ತನಾ, ಶ್ರೀಲಕ್ಷ್ಮಿ, ಸುಮೇಧಾ, ವಿದ್ಯಾ, ನೇಹಾ, ಕೃತಿಕಾ ಇವರುಗಳು ಪರಿಸರ ಗೀತೆಯನ್ನು ಹಾಡಿದರು. ಶಿಕ್ಷಕಿ ಲಕ್ಷ್ಮಿ ಹೆಗಡೆ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು. ಸುವರ್ಣಮಯ ಕಾರ್ಯಕ್ರಮ ನಿರೂಪಿಸಿದರು ಕು. ಅನನ್ಯ ಪ್ರಾರ್ಥನೆಗೈದಳು.
ಸಂಸ್ಥೆಯ ಹಿರಿಯ ವಿಶ್ವಸ್ಥ ರಾದ ರಮೇಶ ಪ್ರಭು ವನಮಹೋತ್ಸವದ ಸಂದರ್ಭದಲ್ಲಿ ಹಾಜರಿದ್ದು ಪರಿಸರದ ಬಗ್ಗೆ ತಿಳಿದುಕೊಂಡಷ್ಟೂ ಇನ್ನೂ ತಿಳಿಯುವುದಿದೆ. ಹಾಗಾಗಿ ಪರಿಸರದ ಜೊತೆಗೆ ನಾವು ನಿಕಟವಾದ ಸಂಬಂಧ ಹೊಂದಿರಲೇ ಬೇಕು ಎಂದರು.
 ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶಕರಾದ ನಿವೃತ್ತ ಉಪನ್ಯಾಸಕ ಬಿ.ಎಸ್ ಗೌಡ ಅವರು ಇಂತಹ ಕಾರ್ಯಕ್ರಮಗಳು ಶಾಲೆಗೂ ಸಮಾಜಕ್ಕೂ ಹಿತವನ್ನುಂಟುಮಾಡುತ್ತದೆ, ಹೀಗಾಗಿ ಇಂದಿನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟರು. ಶಾಲಾ ಮುಖ್ಯ ಶಿಕ್ಷಕರು ಶಿಕ್ಷಕ ವೃಂದದವರು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.