ಕುಮಟಾ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಿರು ಅವಧಿಯ ಸೇನಾ ನೇಮಕಾತಿ ಪ್ರಕ್ರಿಯೆಯ ಅಗ್ನಿಪಥ ಯೋಜನೆಯ ವಿರುದ್ದ ಕುಮಟಾ & ಹೊನ್ನಾವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಯಿತು ೪ ವರ್ಷಗಳ ಕಾಲ ಮಾತ್ರ ಕೆಲಸವನ್ನು ನೀಡಿ ನಂತರ ನಿರುದ್ಯೋಗಿಗಳನ್ನಾಗಿ ಮಾಡುವ ಯೋಜನೆ ಎಂದು ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಬಿಮಣ್ಣ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಅಗ್ನಿಪಥ ಯೋಜನೆ ಯುವ ಜನರನ್ನು ದಾರಿ ತಪ್ಪಿಸುವ ಯೋಜನೆಯಾಗಿದೆ. ಈ ಯೋಜನೆ ಖಾಸಗಿ ಕಂಪನಿಗಳು ಮತ್ತು ಏಜೆನ್ಸಿಗಳು ವ್ಯವಸ್ಥಿತವಾಗಿ ಲಾಭ ಪಡೆದುಕೋಳುವುದಕ್ಕೆ ಮಾಡಲಾಗಿದೆ ಸೈನ್ಯದಲ್ಲೂ ಗುತ್ತಿಗೆ ಪದ್ದತಿ ಜಾರಿಗೋಳಿಸಿಸಲು ಕೇಂದ್ರ ಸರ್ಕಾರ ಹೊರಟಿದೆ.೪ ವರ್ಷ ೬ ತಿಂಗಳು ತರಬೇತಿ ನೀಡಿ ಅಲ್ಪ ಸ್ವಲ್ಪ ಹಣಕಾಸು ನೀಡಿ ಅವರನ್ನು ಮನೆಗೆ ಕಳುಹಿಸಿದ ನಂತರ ಅವರು ಯಾವದೇ ಉದ್ಯೋಗವನ್ನು ಮಾಡದೆ, ಮನೆಯ ಕೆಲಸವನ್ನು ಹಾಗೂ ಕೂಲಿಯನ್ನು ಮಾಡಲು ಸಹ ಅವರಿಗೆ ಮನಸ್ಸು ಒಪ್ಪುವುದಿಲ್ಲ. ಒಬ್ಬ ಯೋಧ ಕನಿಷ್ಠ ೫ ವರ್ಷ ಸೇವೆಯನ್ನು ಸಲ್ಲಿಸಿದಾಗ ಮಾತ್ರ ನಿವೃತ್ತ ಯೋಧ ಎನ್ನುವ ಭಾಗ್ಯವನ್ನು ಸಹ ಬಿಜೆಪಿ ಕಿತ್ತುಕೊಂಡಿದೆ ಎಂದು ಹೆಳಿದರು.
ಕೇಂದ್ರ ಹಾಗೂ ದೇಶದೆಲ್ಲಡೆ 27 ಲಕ್ಷ ಉದ್ಯೋಗ್ಯವನ್ನು ಭರ್ತಿ ಮಾಡಬೇಕಾಗಿದೆ.ಆದರೆ ಅಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಮುಂದೆ ಸೈನ್ಯದಲ್ಲೂ ಸಹ ಹೊರಗುತ್ತಿಗೆಯ ಆಧಾರದ ಮೇಲೆ ಸೇರಿಸಿಕೊಂಡು ಅವರಿಗೆ ಪಿಂಚಣಿಯ ಸೌಲಭ್ಯವನ್ನು ನೀಡುವುದಿಲ್ಲ. ಅಗ್ನಿಪಥ ಎನ್ನುವ ಹೆಸರಿನಲ್ಲಿ ೪ ವರ್ಷ ಮಾತ್ರ ಸೇವೆಗೆ ನೀಡುತ್ತೇವೆ ಎನ್ನಲು ಮುಖ್ಯಕಾರಣ ಅವರಿಗೆ ಪಿಂಚಣಿ ಸೌಲಭ್ಯವನ್ನು ನೀಡಬಾರದು ಎನ್ನುವ ಉದ್ದೇಶವನ್ನು ಹೊಂದಿದೆ ಎಂದು ಮಾಜಿ .ಜಿ.ಪಂ ಸದಸ್ಯರಾದ ಪ್ರದೀಪ ನಾಯಕ ದೇವರಭಾವಿ ಸರಕಾರದ ಧೋರಣೆ ವಿರುದ್ಧ ಕಿಡಿಕಾರಿದರು.
ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರಕಾರವು ಅಭಿವೃದ್ದಿ ಮಾಡಿದ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿ ಅವರು ಮಾತನಾಡಲಿ ಅದನ್ನು ಬಿಟ್ಟು ಅಗ್ನಿಪಥ ಎನ್ನುವ ಯುವಕರನ್ನು ಅಗ್ನಿಪಥ ಎನ್ನುವ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಯೋಜನೆಯಾಗಿದೆ ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ. ಈ ಯೋಜನೆ ವಾಪಾಸ್ ಪಡೆಯುವವರೆಗೂ ಹೋರಾಟ ಮಾಡುತ್ತೇವೆ ಕಾಂಗ್ರೆಸ್ ಮುಖಂಡರು ಹಾಗೂ ಕರವೇ ಜಿಲ್ಲಾಧ್ಯಕ್ಷರಾದ ಬಾಸ್ಕರ ಪಟಗಾರ ಹೇಳಿದರು.
ಈ ಸಂಧರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ. ಮಾಜಿ ಜಿ.ಪಂ ಸದಸ್ಯರಾದ ರತ್ನಾಕರ ನಾಯ್ಕ, ಹೊನ್ನಪ್ಪ ನಾಂiiಕ, ಕಾಂಗ್ರೆಸ್ ಸೇವಾದಳದ ಮಾಜಿ ಅಧ್ಯಕ್ಷರಾದ ಆರ್.ಎಚ್.ನಾಯ್ಕ. ಪುರಸಭಾ ಮಾಜಿ ಅಧ್ಯಕ್ಷರಾದ ಮಧುಸೂಧನ ಶೇಟ್ ಮುಖಂಡರಾದ ಮಂಜುನಾಥ ನಾಯ್ಕ, ಸೇರಿದಂತೆ ಇತರಿದ್ದರು.