Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಅಭ್ಯರ್ಥಿ ಬಸವರಾಜ ಗುರಿಕಾರ ಮತಯಾಚನೆ

ಕುಮಟಾ:ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ  ಬಸವರಾಜ ಗುರಿಕಾರ  ಅವರ ಪರವಾಗಿ ಕುಮಟಾ ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿಯರಾದ  ಶಾರದಾ ಮೋಹನ್ ಶೆಟ್ಟಿಯವರು ಹಾಗೂ ಇತರ ಕಾಂಗ್ರೆಸ್ ಮುಖಂಡರು ಮತಯಾಚನೆ ಮಾಡಿದರು.ಮಹಾತ್ಮ ಗಾಂಧಿ ಪ್ರೌಢಾಶಾಲೆ ಚಿತ್ರಿಗಿ, ಶ್ರೀ ಬಬ್ರುಲಿಂಗೇಶ್ವರ ವಿದ್ಯಾಲಯ ಲುಕ್ಕೇರಿ ಮಾಸೂರು, ತೌಹೀದ್ ಹೈಸ್ಕೂಲ್ ಗುಡ್ ಕಾಗಾಲ, ಲೋಕನಾಥ ಪ್ರೌಢಶಾಲೆ ಗುಡ್ ಕಾಗಾಲ್ ಇಲ್ಲಿ ಶಿಕ್ಷಕರರನ್ನು ಭೇಟಿಯಾಗಿ ಪ್ರಚಾರ ನಡೆಸಿದರು.

 ಬಸವರಾಜ ಗುರಿಕಾರ ಅವರು ಉತ್ತಮವಾದ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ 30ಕ್ಕೂ ಹೆಚ್ಚು ವರ್ಷಗಳ ಕಾಲ ಅನುಭವ ಹೊಂದಿದವರಾಗಿದ್ದಾರೆ. ಅಲ್ಲದೆ ಶಿಕ್ಷಕರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ, ಹಲವಾರು ಶಿಕ್ಷಕರ ಸಮಸ್ಯೆಗಳಿಗೆ ಇತಿಶ್ರೀ ಹಾಡಿದ್ದಾರೆ. ಈ ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳಿಗೆ ಮತವನ್ನು ನೀಡಿ, ಬದಲಾವಣೆ ತರುವುದರ ಮೂಲಕ ಅಭಿವೃದ್ಧಿ ಸಹಕರಿಸಬೇಕಾಗಿದೆ ಎಂದು  ಶಾರದಾ ಮೋಹನ್ ಶೆಟ್ಟಿಯವರು ವಿನಂತಿಸಿಕೊಂಡರು.


ಸಂದರ್ಭದಲ್ಲಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ  ನಾಗೇಶ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ  ಸುರೇಖಾ ವಾರೇಕರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ  ಮುಜಾಫರ್ ಸಾಬ್, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರಾದ  ಹನುಮಂತ ಪಟಗಾರ, ಕಾಗಾಲ ಪಂಚಾಯತ್ ಅಧ್ಯಕ್ಷರಾದ  ಶಶಿಕಾಂತ ನಾಯ್ಕ, ಸದಸ್ಯರಾದ  ಪ್ರಶಾಂತ್ ಶೆಟ್ಟಿ, ಮುಖಂಡರಾದ  ಐ.ಟಿ.ನಾಯ್ಕ ಮುಂತಾದವರು ಹಾಜರಿದ್ದರು