ಭಟ್ಕಳ: ಯುವಮೋರ್ಚಾ ವತಿಯಿಂದ ಶಾಸಕ ಸುನೀಲ ನಾಯ್ಕ ಅವರಿಗೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಸರ್ಕಲ್ ಗೆ ತಿರಂಗಾ ಸರ್ಕಲ್ ಎಂದು ನಾಮಕರಣ ಮಾಡಬೇಕೆಂದು ಮನವಿ ಸಲ್ಲಿಸಿದರು.
ಭಟ್ಕಳ ತಾಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಈಗಿರುವ ಭಟ್ಕಳ ವೃತ್ತ (ಸರ್ಕಲ್) ತೆರವಾಗಲಿದ್ದು, ಸದರಿ ಜಾಗದಲ್ಲಿ ಭಟ್ಕಳದ ಪ್ರತಿಷ್ಠೆ ಮತ್ತು ಗೌರವದ ಸಂಕೇತವಾಗಿ ಪುನಃ ದೊಡ್ಡ ಪ್ರಮಾಣದಲ್ಲಿ ಸರ್ಕಲ್ ನಿರ್ಮಿಸಿ, ಸದರಿ ಹೊಸದಾಗಿ ನಿರ್ಮಾಣವಾಗುವ ಸರ್ಕಲ್ ಗೆ ನಮ್ಮ ದೇಶಕ್ಕೆ ಮತ್ತು ನಮ್ಮ ದೇಶದ ಧ್ವಜಕ್ಕೆ ಗೌರವ ನೀಡುವ ಉದ್ದೇಶದಿಂದ “ತಿರಂಗ_ಸರ್ಕಲ್” ಎಂಬ ನಾಮಕರಣ ಮಾಡಬೇಕೆಂದು ಐ. ಆರ್. ಬಿ ಮತ್ತು ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಲು ಭಟ್ಕಳ ಸಮಸ್ತ ಜನತೆಯ ಪರವಾಗಿ ಭಟ್ಕಳ ಬಿಜೆಪಿ ಯುವಮೋರ್ಚ ವತಿಯಿಂದ ಶಾಸಕ ಸುನೀಲ ನಾಯ್ಕ ಮೂಲಕ ಸಂಸದರಾದ ಅನಂತಕುಮಾರ್ ಹೆಗಡೆ ಹಾಗೂ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಮಹೇಂದ್ರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಉದಯ ದೇವಾಡಿಗ, ತಾಲೂಕ ಪ್ರಧಾನ ಕಾರ್ಯದರ್ಶಿ ರವೀಶ್ ನಾಯ್ಕ, ಕಿರಣ್ ನಾಯ್ಕ, ಉಮೇಶ್ ನಾಯ್ಕ, ವಿನೋದ ದೇವಾಡಿಗ, ದುರ್ಗೇಶ ನಾಯ್ಕ, ಯಶವಂತ ನಾಯ್ಕ ಮುಂತಾದವರು ಹಾಜರಿದ್ದರು.