ಭಟ್ಕಳ : ಹೊನ್ನಾವರ ಮತ್ತು ಭಟ್ಕಳದ ಬಿಜೆಪಿಯ ಮಂಡಲದ ವತಿಯಿಂದ ಶ್ಯಾಮ ಪ್ರಸಾದ ಮುಖರ್ಜಿಯವರ ಬಲಿದಾನ್ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರೆಲ್ಲರೂ ಶ್ಯಾಮ್ ಪ್ರಸಾದ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸುನೀಲ್ ನಾಯ್ಕ ಮಾತನಾಡಿ ಭಾರತೀಯ ಸಂಸ್ಕ್ರತಿಯ ಆಧಾರದ ಮೇಲೆ ದೇಶವನ್ನು ಪುನರ್ ನಿರ್ಮಾಣ ಮಾಡುವ ಹಾಗೂ ಜಗತ್ತಿನಲ್ಲಿ ಭಾರತವನ್ನು ಪ್ರಭಲ ರಾಷ್ಟ್ರವನ್ನಾಗಿಸುವ ಗುರಿಯನ್ನು ಹೊಂದಿ ಆ ಮಹಾನ ಕಾರ್ಯಕ್ಕೆ ತಮ್ಮ ಬದುಕನ್ನು ಮುಡಿಪಾಗಿಟ್ಟ ನಮ್ಮ ಹಿರಿಯರು ನನಗೆ ದಾರಿ ದೀಪವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕುಮಟಾ ಬಿಜೆಪಿಯ ಮುಖಂಡರಾದ ನಾಗರಾಜ್ ನಾಯ್ಕ ತೊರ್ಕೆ ಮಾತನಾಡಿ ನಮ್ಮ ಬಿಜೆಪಿಯ ಪಕ್ಷದಿಂದ ಶ್ಯಾಮ್ ಪ್ರಸಾದ ಮುಖರ್ಜಿಯ ಬಲಿದಾನ್ ದಿವಸ್ ಅಂಗವಾಗಿ ಜೂನ್ ೨೪ ರಿಂದ ಜುಲೈ ೬ ರವರೆಗೆ ಪರಿಸರ ಸ್ನೇಹಿಕಾರ್ಯಕ್ರಮವನ್ನು ಆಯೋಜಿಸಲಾಗಿದೆ ವನಮಹೋತ್ಸವ, ನದಿ, ಹಾಗೂ ಕೆರೆಗಳಲ್ಲಿ ಸ್ಛಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಶ್ಯಾಮ ಪ್ರಸಾದ ಮುಖರ್ಜಿಯವರು ಅಸಾಧಾರಣಾ ಸಂಸದೀಯ ಪಟು, ಭಾರತೀಯ ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ನಂತರ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ವೇಳೆ ಚಂದ್ರು ಎಳಸೆ, ಗೋವಿಂದ ನಾಯ್ಕ, ಸುಭ್ರಾಯ ದೇವಾಡಿಗ, ರವಿ ನಾಯ್ಕ, ಮುಕುಂದ ನಾಯ್ಕ , ಮೂರ್ತಿ ಹೆಗಡೆ, ಮೋಹನ ನಾಯ್ಕ, ಶ್ರೀನಿವಾಸ ನಾಯ್ಕ, ಶಿವರಾಜ್ ಮೇಸ್ತ, ಸುರೇಶ ಹರಿಕಾಂತ್ರ ಇತರಿದ್ದರು.