ಕುಮಟಾ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ ಜಿಲ್ಲಾ ಸಂಸ್ಥೆ ಕಾರವಾರ ಹಾಗೂ ಸ್ಥಳೀಯ ಸಂಸ್ಥೆ ಕುಮಟಾ ವತಿಯಿಂದ ಮೂರು ದಿನಗಳ ರಾಜ್ಯ ಪುರಸ್ಕಾರ ಪೂರ್ವ ಸಿದ್ಧತಾ ಶಿಬಿರವನ್ನು ಕುಮಟಾದ ಬಾಡ ಕಾಂಚಿಕಾ ಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಗಿಡಗಳಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸನ ಜಿಲ್ಲಾ ಮುಖ್ಯ ಆಯುಕ್ತರಾದ ಡಾ|| ಜಿ.ಜಿ.ಸಭಾಹಿತ ಅವರು ಮಾತನಾಡಿ, ಇಂದು ಸ್ಕೌಟ್ಸ್ ಮತ್ತು ಗೈಡ್ಸ ವಿದ್ಯಾರ್ಥಿಗಳಿಗಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು. ಉತ್ತಮ ಸಾಧನೆ ತೋರಬೇಕು, ಸರ್ಕಾರದ ವಿವಿಧ ಹುದ್ದೆಗಳಲ್ಲಿ ಇರುವ ಸ್ಕೌಟ್ಸ್ ನ ಮೀಸಲಾತಿ ನಮ್ಮ ವಿದ್ಯಾರ್ಥಿಗಳಿಗೆ ದೊರೆಯುವಂತಾಗಬೇಕು ಎಂದು, ಈ ಶಿಬಿರಕ್ಕೆ ಸ್ಥಳೀಯವಾಗಿ ಸಿಕ್ಕಿರುವ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೂರು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಜಿಲ್ಲೆಯ 67 ವಿದ್ಯಾ ರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಗೈಡ್ಸನ ಜಿಲ್ಲಾ ಆಯುಕ್ತೆ ಶ್ರೀಮತಿ ಶೋಭಾ ಕುಲಕರ್ಣಿ, ಕಾರ್ಯದರ್ಶಿ ಬಿ.ಡಿ.ಫರ್ನಾಂಡೀಸ್, ಖಜಾಂಚಿ ಆರ್.ಟಿ.ಹೆಬ್ಬಾರ್, ಎ.ಎಸ್.ಓ.ಸಿ ಕರಿಸಿದ್ದಪ್ಪ ತಾಲೂಕು ಕಾರ್ಯದರ್ಶಿ ಕೆ.ಪಿ.ಭಂಡಾರಿ ಹಾಗೂ
ಶಿಬಿರದಲ್ಲಿ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ ವಿದ್ಯಾರ್ಥಿಗಳು, ರೇಂಜರ್ ಮತ್ತು ರೋವರ್ ಗಳು, ಸ್ಕೌಟ್ಸ್ ಮಾಸ್ಟರ್, ಗೈಡ್ಸ ಕಾಪ್ಟನ್ ಗಳು ಹಾಜರಿದ್ದರು.