Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನ ನಡೆಸಿದ ಬಾಲ ಅಪರಾಧಿ ಬಂಧನ

ಕುಮಟಾ: ಕಳೆದ 5 ದಿನದ ಹಿಂದೆ ಮಿರ್ಜಾನ ಸಮೀಪದ ಬಾಲ ಅಪರಾಧಿಯು ತಾಲೂಕಿನ ಕೋಡ್ಕಣಿ ಗ್ರಾಮದ ಹಳಗೇರಿಕೇರಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ.ಕಳ್ಳತನ ನಡೆಸಿದ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮನೆಯ ಬಾಗಿಲಿನ ಬೀಗ ಮುರಿದು ಒಳ ನುಗ್ಗಿ ಕಳ್ಳತನ ನಡೆಸಿದ ಬಾಲ ಅಪರಾಧಿಯನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 103 ಗ್ರಾಂ ತೂಕದ ಒಟ್ಟೂ 5.15 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 
 ರಮೇಶ ವಾಸುದೇವ ನಾಯ್ಕ ಎಂಬುವವರ ಮನೆ ನುಗ್ಗಿ ಮುಂದಿನ ಬಾಗಿಲಿನ ಬೀಗ ಮುರಿದು ಒಳಹೊಕ್ಕಿ ಒಳಗೆ ಬೆಡರೂಮಿನ ಬೀಗ ಮುರಿದು ಬೆಡ್‌ರೂಮಿನ ಒಳಗಡೆ ಇದ್ದ ಸೂಟ್‌ಕೇಸನ್ನು ತೆರೆದಯಮ ಅಲ್ಲಿದ್ದ 40 ಗ್ರಾಂ ತೂಕದ ಮೂರು ಎಳೆಯ ಕೊತಂಬರಿ ಬಂಗಾರದ ಸರ 4.50 ಗ್ರಾಂ ತೂಕದ ದೊಡ್ಡ ಗಾತ್ರದ ಬಂಗಾರದ ಬಳೆ ,20 ಗ್ರಾಮ ತೂಕದ 2 ಸಣ್ಣ ಗಾತ್ರದ ಸಣ್ಣ ಬಳೆಗಳು ಸೇರಿದಂತೆ ಒಟ್ಟು 103 ಗ್ರಾಮ ತೂಕದ ಸುಮಾರ 5.15 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನವಾಗಿತ್ತು.
ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನ ನಡೆಸಿದ ಬಾಲ ಅಪರಾಧಿ ಬಂಧಿಸಿದ್ದು, ಬಂಧಿತ ಆರೋಪಿಯಿಂದ ಸುಮಾರು 5 ಲಕ್ಷ ಮೌಲ್ಯದ ಬಂಗಾರದ ಆಭರಣ ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್, ಹೆಚ್ಚುವರಿ ವರಿಷ್ಠಾಧಿಕಾರಿ ಬದ್ರಿನಾಥ ಎಸ್, ಭಟ್ಕಳ ಡಿ.ಎಸ್.ಪಿ ಬೆಳ್ಳಿಯಪ್ಪ ಕೆ.ಯು ಮಾರ್ಗದರ್ಶನದಲ್ಲಿ ಕುಮಟಾ ಪಿ.ಐ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ಪಿ.ಎಸ್.ಐಗಳಾದ ನವೀನ ನಾಯ್ಕ, ರವಿ ಗುಡ್ಡಿ, ಪದ್ಮಾ ದೇವಳಿ, ಚಂದ್ರಮತಿ ಪಟಗಾರ , ಪ್ರೊಬೆಷನರಿ ಪಿ.ಎಸ್.ಐ ಸುನೀಲ ಅರ್ಧಾವೂರು, ಸಿಬ್ಬಂದಿಗಳಾದ ಸಿ,ಹೆಚ್.ಸಿ-736 ಗಣೇಶ ನಾಯ್ಕ, ಸಿ ದಯಾನಂದ ನಾಯ್ಕ, ಸಂತೋಷ ಬಾಳೇರ, ಕೃಷ್ಣ ಎನ್. ಜಿ, ಬಸವರಾಜ ಜಾಡರ, ಶಿವಾನಂದ ಜಾಡರ್, ಸಂಜೀವ ನಾಯ್ಕ, ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.