Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕಾಲೇಜಿಗೆ ತೆರಳುವ ರಸ್ತೆ ದುರಸ್ತಿ ಪಡಿಸಿಕೊಡುವಂತೆ ವಿದ್ಯಾರ್ಥಿಗಳು ಶಾಸಕ ದಿನಕರ ಶೆಟ್ಟಿ ಮನವಿ

ಕುಮಟಾ: ಪಟ್ಟಣದ ಹೆಗಡೆ ಕ್ರಾಸ್ ನಿಂದ ಬಾಳಿಗಾ ಕಾಲೇಜಿನವರೆಗೆ ರಸ್ತೆ ಹೊಂಡಮಯವಾಗಿದ್ದು ಕೂಡಲೇ ದುರಸ್ತಿ ಪಡಿಸಿಕೊಡಬೇಕೆಂದು ಬಾಳಿಗಾ ಕಾಲೇಜಿನ ವಿದ್ಯಾರ್ಥಿಗಳು ಶಾಸಕ ದಿನಕರ ಶೆಟ್ಟಿ ಅವರಿಗೆ  ಮನವಿ ಸಲ್ಲಿಸಿದರು.


ಪುರಸಭೆಯವರು ಚರಂಡಿ ಕಾಮಗಾರಿ ಮಾಡುವಾಗ ರಸ್ತೆಯನ್ನು ಅಗೆದು, ಬಳಿಕ ಮೊದಲಿನಂತೆ ಇಡುವ ಬದಲು ನಿಷ್ಕಾಳಜಿವಹಿಸಿ ಕೆಲಸ ಮುಗಿಸಿದ್ದಾರೆ. ಇದರಿಂದ ರಸ್ತೆ ಮಧ್ಯೆ ಹೊಂಡಗಳು ತುಂಬಿಕೊಂಡಿದ್ದು ರಿಕ್ಷಾ ಚಾಲಕರು ಹೊಂಡ ತಪ್ಪಿಸಲು ದಿಢೀರ್ ಎಡಬಲಗಳಿಗೆ ತಿರುಗುವ ಕಾರಣ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ಒಂದೇ ವಾರದಲ್ಲಿ ಕಾಲೇಜಿನ ಮೂರ್ನಾಲ್ಕು ವಿದ್ಯಾರ್ಥಿಗಳಿಗೆ ಈ ಅವಸ್ಥೆ ಎದುರಾಗಿದೆ. ಹಾಗಾಗಿ ತಕ್ಷಣ ಇಲ್ಲಿಯ ರಸ್ತೆಯನ್ನು ದುರಸ್ತಿ ಮಾಡಿಕೊಡಲು ಮನವಿಯಲ್ಲಿ ತಿಳಿಸಲಾಗಿದೆ. 

ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಹಾಗೂ ಐ.ಆರ್. ಬಿ ಅಧಿಕಾರಿಗಳಿಗೆ ಶಾಸಕ ದಿನಕರ ಶೆಟ್ಟಿ ಅವರು ದೂರವಾಣಿ ಕರೆ ಮಾಡಿ ವ್ಯವಸ್ಥೆ ಸರಿಪಡಿಸಲು ಸೂಚಿಸಿದರು. ಡಾ. ಎವಿ ಬಾಳಿಗಾ ವಾಣಿಜ್ಯ ವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ವಿಕ್ರಮ ಪುರೋಹಿತ್, ಅಭಿಷೇಕ ಅಮಯ್, ಪ್ರತೀಕ್, ಧನುಷ್, ಸುಶಾಂತ್ ಮುಂತಾದವರು ಇದ್ದರು.