ಕುಮಟಾ: ಶಿಕ್ಷಕರ ಧ್ವನಿಯಾಗಿ ಕರ್ತವ್ಯವನ್ನು ನಿರ್ವಹಿಸದ ಬಸವರಾಜ್ ಹೊರಟ್ಟಿ ಈ ಬಾರಿ ಕರ್ನಾಟಕ ಪಶ್ವಿಮ ಶಿಕ್ಷಕರ ಮತಕ್ಷೇತ್ರಕ್ಕೆ ಚುನಾವಣೆಗೆ ಸ್ವರ್ದಿಸಿದ್ದು ಅತಿ ಹೆಚ್ಚಿನ ಮತಗಳಿಂದ ಅವರನ್ನು ಆಯ್ಕೆಗೊಳಿಸಬೇಕಾಗಿದೆ, ಕಳೆದ 42 ವರ್ಷಗಳಿಂದ ಶಿಕ್ಷಕರ ಸಮಸ್ಯೆಗೆ ಸ್ವಂದಿಸುವ ಮನೋಭಾವ ಹೊಂದಿರುವ ಸಜ್ಜನ ನಾಯಕರಾಗಿದ್ದಾರೆ ಎಂದು ಕುಮಟಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ನಾಗರಾಜ ನಾಯಕ ತೊರ್ಕೆ ಹೇಳಿದರು.
ಅವರು ದಾರೇಶ್ವರ, ಉರುಕೇರಿ ಸಂತೆಗುಳಿ , ಮೂರೂರು ಭಾಗದ ಪೌಢಶಾಲೆಗಳಿಗೆ ಭೇಟಿ, ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿಯವರ ಪರ ಪ್ರಚಾರ ನಡೆಸಿದರು.
ಸಂದರ್ಭದಲ್ಲಿ ಬಿಜೆಪಿಯ ಮಂಡಲಾಧ್ಯಕ್ಷ ಹೆಮಂತ ಕುಮಾರ ಗಾಂವ್ಕರ, ಪ್ರಮುಖರಾದ ಎಂ.ಜಿ.ಭಟ್, ಎಸ್.ಜಿ.ನಾಯ್ಕ, ಬಿ.ಡಿ.ಪಟಗಾರ, ಚಿನ್ಮಯ ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು.