ಕುಮಟಾ : ಇತ್ತೀಚಿಗೆ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕುಮಟಾ ತಾಲೂಕಿನ ಮುನ್ಸಿಪಲ್ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳಾದ ವೆಂಕಟೇಶ್ ಪ್ರಭು ಅವರು 93 ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕ ಹಾಗೂ 66 ಕೆ.ಜಿ ವಿಭಾಗದಲ್ಲಿ ರಾಘವೇಂದ್ರ ನಾಯ್ಕ್ ಬಗ್ಗೋಣ ಕಂಚಿನ ಪದಕ ಪಡೆದು ಮಾಸ್ಟರ್ ಕೇಟಗರಿಯಲ್ಲಿ ಉತ್ತರಕನ್ನಡ ಜಿಲ್ಲಿಗೆ ಕೀರ್ತಿ ತಂದಿದ್ದಾರೆ.
ಇವರಿಗೆ ಮುನ್ಸಿಪಲ್ ವ್ಯಾಯಾಮ ಶಾಲೆಯ ತರಬೇತುದಾರರಾದ ಗುರುರಾಜ್ ಉಪ್ಪಾರ್ ಹಾಗೂ ಶಾಲೆಯ ಎಲ್ಲಾ ಆತ್ಮೀಯ ವಿದ್ಯಾರ್ಥಿಗಳು, ಊರನಾಗರಿಕರು, ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಈಗಾಗಲೇ ಪವರ್ ಲಿಪ್ಟಿಂಗ್‌ನಲ್ಲಿ ಸಾಕಷ್ಟು ಸಾಧನೆಗೈದಿರುವ ಕುಮಟಾದ ವೆಂಕಟೇಶ್ ಪ್ರಭು ಅವರು ಏಷ್ಯನ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದು, ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಲಿದ್ದಾರೆ. ಈ ಒಂದು ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿಯೂ ಸಹ ಕುಮಟಾದ ಪ್ರತಿಭೆ ವೆಂಕಟೇಶ್ ಪ್ರಭು ಅವರು ಚಾಂಪಿಯನ್ ಆಗಿ ಹೊರಹೊಮ್ಮಲಿ ಎಂದು ಎಲ್ಲರೂ ಶುಭಹಾರೈಸಿದ್ದಾರೆ.