ಶಿರಸಿ:- ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮನೋಜ್ ಆರ್. ಹೆಗಡೆ (29) 213ನೇ ರ್ಯಾಂಕ್ ಪಡೆದಿದ್ದಾರೆ.
ಶಿರಸಿಯ MES ಕಾಲೇಜಿನಲ್ಲಿ ಪಿಯುಸಿ ಮಾಡಿದ ನಂತರ ಧಾರವಾಡದಲ್ಲಿ BSC ಅಗ್ರಿಕಲ್ಚರ್ ಪದವಿ ಪಡೆದಿರುವ ಮನೋಜ್ ರವರು ಪಶು ಸಂಗೋಪನೆ ಇಲಾಖೆಯ ನಿವೃತ್ತ ಅಧಿಕಾರಿ ರಾಮನಾಥ ಹೆಗಡೆ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೀತಾ ಹೆಗಡೆಯವರ ಪುತ್ರನಾಗಿದ್ದಾರೆ
ದೆಹಲಿಯಲ್ಲಿ ಡಾ. ಶಿವಕುಮಾರ್ ಹಾಗೂ ಶಿರಸಿಯಲ್ಲಿ ವಿ.ಆರ್. ಹೆಗಡೆ ಎಸ್.ಜಿ. ಕರಿಯರ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆದಿದ್ದ ಇವರು
ಮೂರು ಸಲ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಇಂಟರ್‌ವ್ಯೂನಲ್ಲಿ ಫೇಲಾಗಿದ್ದರು ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಯನ್ನು ಪಾಸ್ ಮಾಡಿದ್ದಾರೆ.
ಮನೋಜ್ ಅವರಿಗೆ ಐಪಿಎಸ್ ಅಧಿಕಾರಿಯ ಹುದ್ದೆ ಸಿಗುವ ಸಾಧ್ಯತೆಗಳಿವೆ ಎನ್ನಲಾಗಿದೆ.