Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ: ಕುಮಟಾ ದ ಸಿ.ವಿ.ಎಸ್.ಕೆ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೇ ಫಸ್ಟ್…!

ಕುಮಟಾ : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಇಂದು ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿಯು ಕುಮಟಾ ತಾಲೂಕಿನ ಸಿವಿಎಸ್ ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ    ಮಾಡುವ ಮೂಲಕ ಇಡೀ ರಾಜ್ಯ ಕುಮಟಾದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ಶೇಕಡಾ 100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದ್ದಾರೆ.


ಕುಮಟಾದ ವಿದ್ಯಾಗಿರಿಯಲ್ಲಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಕೊಲಾಬಾ ವಿಠೋಬಾ ಶಾನಭಾಗ ಕಲಭಾಗಕರ್ (ಸಿವಿಎಸ್ ಕೆ) ಪ್ರೌಢಶಾಲೆಯ ಮೇಘನಾ ಭಟ್ಟ, ಕಾರ್ತಿಕ ಭಟ್ಟ ಹಾಗೂ ದೀಕ್ಷಾ ನಾಯ್ಕ 625ಕ್ಕೆ 625 ಅಂಕ ಪಡೆದು ನೂರಕ್ಕೆ ನೂರು ಫಲಿತಾಂಶ ದಾಖಲಿಸಿದ್ದಾರೆ.  ಈ ಮೂರು ವಿದ್ಯಾರ್ಥಿಗಳ ಸಾಧನೆ ಇದು ಶಿಕ್ಷಣ ಸಂಸ್ಥೆಯ ಗೌರವವನ್ನು ಹೆಚ್ಚಿಸಿದೆ. ಸಿವಿಎಸ್ ಕೆ ಪ್ರೌಢಶಾಲೆಯ ಸುಮಾರು 32 ವಿದ್ಯಾರ್ಥಿಗಳು ಈ ಬಾರಿ ಟಾಪ್ ಟೆನ್ ನಲ್ಲಿದ್ದು, ಶಾಲೆಯ ಶಿಕ್ಷಕರು ಕೂಡ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗೆ ಕುಳಿತ 152 ವಿದ್ಯಾರ್ಥಿಗಳಲ್ಲಿ, 23 ವಿದ್ಯಾರ್ಥಿಗಳು 99% ಕ್ಕಿಂತ ಹೆಚ್ಚು, 45 ವಿದ್ಯಾರ್ಥಿಗಳು 98% 78 ವಿದ್ಯಾರ್ಥಿಗಳು 95%, 111 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. 


ಸಾಧನೆ    ಗೈದ ಮೂವರು ವಿದ್ಯಾರ್ಥಿಗಳು ಸಂಸ್ಥೆಯ ಶಿಕ್ಷಕ ವೃಂದ ಮುಖ್ಯಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಸಂಸ್ಥೆಯಲ್ಲಿ ಸೇರಿ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಟ್ಟ ಪಾಲಕ ವೃಂದದವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ.