ಕುಮಟಾ : ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ್ ನಾಯ್ಕ್ ಅವರು ಕಾರು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಸಮೀಪದ ನಾವುಂದ ಬಳಿ ಅಪಘಾತ ಸಂಭವಿಸಿದೆ, ಪಾದಚಾರಿ ಓರ್ವ ರಾಷ್ಟ್ರ ಹೆದ್ದಾರಿ ದಾಟುತ್ತಿರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯ ಡಿವೈಡರ್ ಗೆ ಡಿಕ್ಕಿ ಸಂಭವಿಸಿದೆ.
ಆದರೆ ಅದೃಷ್ಟವಶಾತ್ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಮಂಗಳೂರಿನ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ರತ್ನಾಕರ ನಾಯ್ಕ ಅವರ ಮಗಳ ಯೋಗಕ್ಷೇಮ ವಿಚಾರಣೆ ಮಾಡಿ ಊರಿಗೆ ಬರುತ್ತಿರುವಾಗ ಅಪಘಾತ ಸಂಭವಿಸಿದೆ ಎಂದು
ತಿಳಿದು ಬಂದಿದ್ದೆ. ರತ್ನಾಕರ್ ನಾಯ್ಕ್ ಅವರಿಗೆ ಕಾಲು ಮುರಿದಿದೆ ಎನ್ನುವ ಮಾಹಿತಿ ಇದ್ದು, ಕಾರಿನಲ್ಲಿ ಇದ್ದ ವಕೀಲರಾದ ಆರ್. ಜಿ ನಾಯ್ಕ್ ಅವರಿಗೆ ಸಣ್ಣ ಪುಟ್ಟ ಗಾಯಗೊಂಡಿದ್ದು ಎನ್ನಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಕುಂದಾಪುರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.