Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಮನೆ ಮಂಜೂರಿ ಮಾಡಲು ವಸತಿ ಸಚಿವರು ಸ್ಪಂದಿಸಿದ್ದಾರೆ ಶಾಸಕ ದಿನಕರ ಶೆಟ್ಟಿ

ಕುಮಟಾ: 780 ಮನೆ ಮಂಜೂರಿಯಾಗಿದ್ದು ಇನ್ನು ಹೆಚ್ಚಿನ ಮನೆ ಅವಶ್ಯಕತೆಯಿದ್ದು ಮತ್ತಷ್ಟು ಮನೆ ಮಂಜೂರಿ ಮಾಡಲು ವಸತಿ ಸಚಿವ ವಿ.ಸೋಮಣ್ಣ  ಅವರ ಬಳಿ ವಿನಂತಿಸಲಾಗಿದೆ, ಅವರು ಸಕಾರಾತ್ಮಕವಾಗಿ ಸ್ವಂದಿಸಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
 ಅವರು ಕುಮಟಾದ ತಾ.ಪಂ ಆವಾರದಲ್ಲಿ  ಜಿಲ್ಲಾ  ಪಂಚಾಯತ, ತಾಲೂಕಾ ಪಂಚಾಯತ ಹಾಗೂ ತಾಲೂಕಿನ 22 ಗ್ರಾಮ ಪಂಚಾಯತಗಳ ಸಹಯೋಗದಲ್ಲಿ ರಾಷ್ಟ್ರಿಯ ಪಂಚಾಯತ  ರಾಜ್ ದಿವಸ 2022 ರ ಅಂಗವಾಗಿ ಕುಮಟಾ ತಾಲೂಕಿನ 22 ಗ್ರಾ.ಪಂಗಳ  2020-21 ನೇ ಸಾಲಿನ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ನಿರ್ಮಾಣದ ಕಾರ್ಯಾದೇಶ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಲ ಕಾರಣಗಳಿಂದ ಮನೆಗಳ ಮಂಜೂರಿ ವಿಳಂಬವಾಗಿತ್ತು. ಅವರಿಗೆ ಆದಷ್ಟು ಶೀಘ್ರವಾಗಿ ಮನೆ ನಿರ್ಮಾಧ ಕಾರ್ಯಾದೇಶ ನೀಡಬೇಕು ಎಂದು ಕಾರ್ಯಕ್ರಮ ಆಯೋಜಿಸಲಾಗಿದೆ. 
ತಾಲೂಕಿನ ಗ್ರಾ.ಪಂ ಅಧ್ಯಕ್ಷರು ಹಾಗೂ ಅಭಿವೃದ್ದಿ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.780 ಮನೆಗಳು ಮಂಜೂರಿಯಾಗಿದ್ದು ಈಗ 220 ಫಲಾನುಭವಿಗಳಿಗೆ ಈ ಕಾರ್ಯಾದೇಶ ನೀಡಲಾಗಿದೆ ಎಂದರು.ಮನೆ ನಿರ್ಮಾಣದ 19 ಕೋಟಿ ರೂ ಹಣ ಕೆಲ ಕಾರಣದಿಂದ ಫಲಾನುಭವಿಗಳಿಗೆ ಜಮೆಯಾಗಿಲ್ಲ. ಅದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸರ್ಕಾರದ ಮೇಲೆ ಒತ್ತಡ ತಂದು ಎಲ್ಲರಿಗೂ ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ. ಸಂಜೀವಿನಿ ಸ್ವ- ಸಹಾಯ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿ, ಪ್ರಧಾನಮಂತ್ರಿ ಕಿರು ಆಹಾರ ಉತ್ಪನ್ನ ನಿಧಿ ಸಾಲ ವಿತರಣೆ ಆಜೀವಿಕಾ ಗ್ರಾಮೀಣ ಎಕ್ಸ್‌ಪ್ರೆಸ್ ಯೋಜನೆಯ ವಾಹನವನ್ನು ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಹಸ್ತಾಂತರಿಸಿದರು.

ಈ ವೇಳೆ ತಾ.ಪಂದ ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ, ತಾ.ಪಂ ಆಡಳಿತಾಧಿಕಾರಿ ಈಶ್ವರ ನಾಯ್ಕ, ಪುರಸಭಾ ಅಧ್ಯಕ್ಷೆ ಅನುರಾಧ ಬಾಳೇರಿ, ಅಕ್ಷರ ದಾಸೋಹ ಇಲಾಖೆಯ ಸಹಾಯ ನಿರ್ದೇಶಕ ದೇವರಾಯ ನಾಯ್ಕ ಉಪಸ್ಥಿತರಿದ್ದರು.