Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕಮಲಾ ಬಾಳಿಗಾ ಶಿಕ್ಷಣ ಮಹಾವಿಧ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

ಕುಮಟಾ: ಕಮಲಾ ಬಾಳಿಗಾ ಶಿಕ್ಷಣ ಮಹಾವಿಧ್ಯಾಲಯದ 2021-22ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆಯನ್ನು ಕಮಲಾ ಬಾಳಿಗಾ ಶಿಕ್ಷಣ ಮಹಾವಿಧ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರವಾರ ಇದರ ಉಪನಿರ್ದೇಶಕರಾದ ಹರೀಶ ಗಾಂವ್ಕರ್ ಇವರು ದೀಪ ಬೆಳಗಿಸುವುದರ ಕಾರ್ಯಕ್ರಮಕ್ಕೆ  ಮೂಲಕ ಚಾಲನೆ ನೀಡಿದರು.
 ನಂತರ ಮಾತನಾಡಿದ ಅವರು ಸಮಾಜಕ್ಕೆ ಸಹಕಾರಿಯಾಗುವಂತಹ ಶಿಕ್ಷಣವು, ವಿದ್ಯಾಥಿಗಳಿಗೆ ಸಿಗಬೇಕಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಘವು ಹೆಜ್ಜೆ ಹಾಕಬೇಕು,  ನಾನು ಸಹ ಕಮಲಾ ಬಾಳಿಗಾ ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿಯಾಗಿದ್ದೆ. ನಾನು ಕಲಿತ ಕಾಲೇಜಿನಲ್ಲಿ ಉದ್ಘಾಟಕನಾಗಿ ಭಾಗವಹಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದರು. ಎ.ವಿ.ಬಾಳಿಕಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಉಮೇಶ ಶಾಸ್ತ್ರಿಯವರು.ಕಮಲಾ ಬಾಳಿಗಾ ಶಿಕ್ಷಣ ಮಹಾವಿಧ್ಯಾಲಯದ ಪ್ರಾಂಶುಪಾಲರಾದ ಪ್ರೀತಿ ಬಂಡಾರ‍್ಕರ್ ಅವರು ಬಿ.ಎಡ್ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ಪರಿಷ್ಕ್ರತ ಆವೃತ್ತಿ, 2022 ಟಿ.ಇ.ಟಿ ಮತ್ತು ಸಿ.ಇ.ಟಿ ಬಾಷಾ ಶಾಸ್ತ್ರ ಸಂಪನ್ಮೂಲ ಪುಸ್ತಕವಾದ ಭಾಷಾ ಶಾಸ್ತ್ರ ಮತ್ತು ಭಾಷಾ ಭೋಧನಾ ಶಾಸ್ತ್ರ ಮತ್ತು ವಿಷಯಾಂತರಗತವಾಗಿ ಭಾಷೆ ಎನ್ನುವ ಪುಸ್ತಕವನ್ನು ಲೋಕಾರ್ಪಣೆಗೋಳಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಉಮೇಶ ಶಾಸ್ತ್ರಿಯವರು ಪುಸ್ತಕದ ಕುರಿತು ವಿವರಣೆ ನೀಡಿದರು. ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಹರೀಶ ಗಾಂವ್ಕರ್ ಅವರನ್ನು ಹಾಗೂ ರಂಗ ಭೂಮಿ ನಿರ್ದೇಶಕರಾದ ಡಾ ಶ್ರೀಪಾದ ಭಟ್ ಅವರನ್ನು ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರೆಲ್ಲರೂ ಸೇರಿ ಸನ್ಮಾನಿಸಿ ಗೌರವಿಸಿದರು. ಇದೆ ವೇಳೆ ಕಮಲಾ ಬಾಳಿಗಾ ಕಾಲೇಜಿನ ರ‍್ಯಾಂಕ್ ವಿಜೇತ್ ವಿಧ್ಯಾರ್ಥಿಗಳನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಲಾ ಬಾಳಿಗಾ ಶಿಕ್ಷಣ ಮಹಾವಿಧ್ಯಾಲಯದ ಪ್ರಾಂಶುಪಾಲರಾದ ಪ್ರೀತಿ ಬಂಡಾರ್‌ಕ್ಕರ ವಹಿಸಿದ್ದರು. ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿಯಾದ ಸುಧಾಕರ ನಾಯಕ, ವಿಧ್ಯಾರ್ಥಿ ಸಂಘದ ಕಾರ್ಯಧ್ಯಕ್ಷರಾದ ವಿನಾಯಕ ಕೆ ಭಟ್, ಕಾರ್ಯದರ್ಶಿಗಳಾದ ಸಹನಾ ನಾಯ್ಕ ಇತರಿದ್ದರು.