Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಮೀನುಗಾರರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಶಾಸಕ ದಿನಕರ ಶೆಟ್ಟಿ ಅಭಿಮತ

ಕುಮಟಾ: ನಮ್ಮ ಜಿಲ್ಲೆಯ ಶಾಸಕರೆಲ್ಲರೂ ಒಗ್ಗಟ್ಟಾಗಿ ಮೀನುಗಾರರ ಪರ ಗಟ್ಟಿ ದ್ವನಿ ಎತ್ತಿ ಅವರ ಬೇಡಿಕೆಯಗಳನ್ನು ಈಡೇರಿಸುವ ಅವಶ್ಯಕತೆ  ಇದೆ ಎಂದು ಶಾಸಕರಾದ ದಿನಕರ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಕುಮಟಾ ಪಟ್ಟಣದ ಮಣಕಿ ಮೈದಾನದಲ್ಲಿ ಕುಮಟಾ ತಾಲೂಕಾ ಹರಿಕಂತ್ರ ಸಮಾಜದ ಅಭಿವೃದ್ದಿ ಒಕ್ಕೂಟದಿಂದ ೨ ದಿನಗಳ ಕಾಲ ಆಯೋಜಿಸಿದ ಕ್ರಿಕೆಟ್ ಲೀಗ್ ಪಂದ್ಯಾವಳಿ ಉಧ್ಘಾಟಿಸಿ ಅವರು ಮಾತನಾಡಿದರು.  
ಹರಿಕಂತ್ರ ಸಮಾಜದವರು ಶ್ರಮ ಜೀವಿಗಳಾಗಿದ್ದು ಪ್ರತಿನಿತ್ಯ ದುಡಿಮೆಯನ್ನೆ ತಮ್ಮ ಕಾಯಕವನ್ನಾಗಿಸಿಕೊಂಡಿದ್ದಾರೆ. ಮೀನುಗಾರರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಕರಾವಳಿ ಭಾಗದಲ್ಲಿ ಮೀನುಗಾರಿಕೆಯನ್ನು ನಂಬಿ ಸಾಕಷ್ಟು ಕುಟುಂಬಗಳು ಜೀನ ಸಾಗಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಕೆ ಮಾಡಿದರೆ ಉತ್ತರಕನ್ನಡ ಜಿಲ್ಲೆಯ ಮೀನುಗಾರರು ಸರ್ಕಾರಿ ಸೌಭ್ಯವನ್ನು ಪಡೆದುಕೋಳ್ಳಲು ಹಿಂದೇಟು ಹಾಕುತ್ತಿದ್ದಾರೆ ಮೀನುಗಾರರು ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠಗೋಳ್ಳಬೇಕು. ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಸಮಾಜ ಮತ್ತಷ್ಟು ಸಂಘಟನೆಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕ್ರೀಡಾಂಗಣ ಉದ್ಘಾಟಸಿ ಮಾತನಾಡಿದ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಗರ ಮಾಲಾ ಯೋಜನೆಯ ಹೆಸರಿನಲ್ಲಿ ಮೀನುಗಾರರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದೆ. ಇದರ ವಿರುದ್ದ ಮೀನುಗಾರರು ಸಂಘಟಿತರಾಗಿ ಹೋರಾಟ ಮಾಡುವ ಅನಿವಾರ್ಯತೆಯಿದ್ದು ಸರ್ಕಾರದ ಕೆಲ ಮೃದು ಧೋರಣೆಯಿಂದ ಮೀನುಗಾರರು ಬಹಳಷ್ಟು ಕಷ್ಟವನ್ನು ಎದುರಿಸಬೇಕಾಗಿದೆ, ಮೀನುಗಾರರ ಪ್ರತಿಯೊಂದು ಹೋರಾಟಕ್ಕೂ ನಿಮ್ಮ ಜೋತೆ ನಾನು ಸದಾ ಇರುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕಾಂತ್ರ ಸಮಾಜದ ಅಭಿವೃದ್ದಿ ಒಕ್ಕುಟದ ಅಧ್ಯಕ್ಷರಾದ ಜಗದೀಶ ಹರಿಕಂತ್ರ ವಹಿಸಿದ್ದರು, ಕಾಂಗ್ರೇಸ್ ಮುಖಂಡರಾದ ರವಿಕುಮಾರ ಎಂ ಶೆಟ್ಟಿ, ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ, ಹರಿಕಾಂತ್ರ ಸಮಾಜದ ಅಭಿವೃದ್ದಿ ಒಕ್ಕೂಟದ ಉಪಾಧ್ಯಕ್ಷರಾದ ಸುರೇಶ ಹರಿಕಾಂತ್ರ ಪ್ರಮುಖರಾದ ನಾಗಪ್ಪ ಹರಿಕಾಂತ್ರ ಮತ್ತಿತ್ತರರು ಉಪಸ್ಥಿತರಿದ್ದರು.