ಕುಮಟಾ: ತಾಲೂಕಿನ 9 ಗ್ರಾ.ಪಂಗಳ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಇಲಾಖೆಯ ಸಚಿವರಾದ ಕೆ.ಎಸ್. ಈಶ್ವರಪ್ಪ ಲೋಕಾರ್ಪಣೆಗೋಳಿಸಿದರು.
ನಂತರ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು 1250 ಕೋಟಿ ವೆಚ್ಚದಲ್ಲಿ ಹೆಣ್ಣು ಮಕ್ಕಳ ನೀರಿಗಾಗಿ ಸಂಕಷ್ಟ ಅನುಭವಿಸಬಾರದು ಎನ್ನುವ ಉದ್ದೇಶದಿಂದ ಪ್ರತಿ ಮನೆ, ಮನೆಗೆ ನೀರು ನೀಡುವ ಯೋಜನೆ ಆರಂಭಿಸಿದ್ದಾರೆ, ಎಲ್ಲರೂ ಸೇರಿ ಮನೆ ಮನೆಗೆ ಗಂಗೆ ಎನ್ನುವ ಸದುದ್ದೇಶದಿಂದ ನೀರು ನೀಡೋಣ ಎಂದ, ಅವರು ನಮ್ಮಲ್ಲಿ ನದಿಗಳು ಪಕ್ಕದಲ್ಲೆಯೇ ಹರಿದರೂ ಹಲವಾರು ಗ್ರಾಮಗಳಿಗೆ ಈವರೆಗೆ ನೀರು ದೊರೆತಿಲ್ಲ, ಇನ್ನು ಒಂದು ವರ್ಷದಲ್ಲಿ ಪ್ರತಿ ಮನೆಗಳಿಗೆ ನೀರು ನೀಡುವ ಯೋಜನೆ ಇದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ ೨೦೦೨ರಲ್ಲಿ ಅಂದಿನ ಶಾಸಕ ಮೋಹನ ಶೆಟ್ಟಿ ಯೋಜನೆಗೆ ಚಾಲನೆ ನೀಡಿದರು, ಆದರೆ ಸಾಕಷ್ಟು ಅಡೆತಡೆ ಬಂದಿತ್ತು.೨೦೦೮ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಅಂದಿನ ಸಚಿವರಾದ ಜಗದೀಶ ಶೆಟ್ಟರ್ ಅವರಿಗೆ ಯೋಜನೆಗೆ ಅನುದಾನ ನೀಡಿ ಎಂದು ವಿನಂತಿಸಿದ್ದೆ, ಹಲವಾರು ಹೋರಾಟಗಳ ನಂತರ ಈ ಯೋಜನೆ ಮತ್ತೆ ಆರಂಭವಾಯಿತು, ಮತ್ತೊಮ್ಮೆ ಆಯ್ಕೆಯಾದ ಬಳಿಕ ಸಚಿವರಲ್ಲಿ ನಿರಂತರ ಒತ್ತಡ ಹೇರಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಯೋಜನೆ ಮುಕ್ತಾಯಗೊಂಡು ಉದ್ಘಾಟನೆಗೊಂಡಿದೆ ಎಂದರು
ಈ ಸಂಧರ್ಭದಲ್ಲಿ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಗೋಕರ್ಣ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಜನ್ನು, ತೋರ್ಕೆ ಗ್ರಾ.ಪಂ ಅಧ್ಯಕ್ಷ ಆನಂದು ಕವರಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ ತಾಪಂ ಕಾರ್ಯನಿರ್ವಣಾಧಿಕಾರಿಗಳಾದ ಸಿ,ಟಿ,ನಾಯ್ಕ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.