ಕುಮಟಾ: ಯುವ ಬ್ರೀಗೆಡ್ ಸಂಘಟನೆಯು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಸಮಾಜದಲ್ಲಿ ಹೊಸ ಮುನ್ನಡಿ ಬರೆಯುತ್ತಿದೆ, ಹೌದು ಚಕ್ರವರ್ತಿ ಸೂಲಿಬೆಲೆಯವರ ಹುಟ್ಟು ಹಬ್ಬದ ಹಿನ್ನೆಲೆಯ ಕುಮಟಾದ ಹೊಸ ಬಸ್ ನಿಲ್ದಾಣದ ಕುಡಿಯುವ ನೀರಿನ ಟ್ಯಾಂಕ ಸ್ವಚ್ಛ ಮಾಡಲಾಯಿತು.
ನೀರಿನ ಟ್ಯಾಂಕ್‌ಗಳು ಕೆಸರುಮಯವಾಗಿ ನಲ್ಲಿಯಲ್ಲಿ ಅಶುದ್ದ ನೀರು ಬರುತ್ತಿರುವ ಬಗ್ಗೆ ಸಾರ್ವಜನಿಕರ ಮಾಹಿತಿ ನೀಡಿದ ಮೇರೆಗೆ ವಾ.ಕ.ರಾ.ಸಾ, ಸಹಕಾರದಲ್ಲಿ ಶ್ರಮದಾನ ಮಾಡಿ ಚಕ್ರವರ್ತಿ ಸೂಲಿಬೆಲೆ ಅವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಡಿಪೋ ವ್ಯವಸ್ಥಾಪಕ ಬಾನಾವಳಿಕರ, ಈ ಟ್ಯಾಂಕ್ ಮುಂದಿನ ದಿನಗಳಲ್ಲಿ ಬಸ್ ನಿಲ್ದಾಣದವರು ಮುಂದಿನ ದಿನಗಳಲ್ಲಿ ೨ ತಿಂಗಳಿಗೊಮ್ಮೆ ಸ್ಚಚ್ಛಗೋಳಿಸಲಾಗುವುದು ಎಂದು ಭರವಸೆ ನೀಡಿದರು. ಯುವ ಬ್ರೀಗೆಡ್‌ನ ಈ ಸಾರ್ವಜನಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂಧರ್ಭದಲ್ಲಿ ನಿಲ್ದಾಣದ ಸಂಚಾರ ನಿಯಂಥ್ರಕ ಉದಯ ಹಾದಿಮನೆ, ಯುವ ಬ್ರಿಗೇಡ್‌ನ ಮಂಗಳೂರು ವಿಭಾಗ ಸಂಚಾಲಕ ಅಣ್ಣಪ್ಪ ನಾಯ್ಕ, ಜಿಲ್ಲಾ ಸಂಚಾಲಕ ಸತೀಶ ಪಟಗಾರ, ತಾಲೂಕು ಸಂಚಾಲಕ ಪ್ರಕಾಶ ನಾಯ್ಕ ಸದಸ್ಯರಾದ ಸಂದೀಪ ಮಡಿವಾಳ, ಶ್ರವಣ ಕುಮಾರ ನಾಯ್ಕ, ಅಮಿತ್ ಪಟಗಾರ ಸ್ಚಚ್ಛತೆ ಕಾರ್ಯದಲ್ಲಿ ಪಾಲ್ಗೋಂಡಿದ್ದರು.